ಕ್ಯಾನ್ಸರ್‌ ಔಷಧವೂ ಮಾದಕ ದ್ರವ್ಯವಾಗಿ ಬಳಕೆ!

7

ಕ್ಯಾನ್ಸರ್‌ ಔಷಧವೂ ಮಾದಕ ದ್ರವ್ಯವಾಗಿ ಬಳಕೆ!

Published:
Updated:

ಬೆಂಗಳೂರು: ಕ್ಯಾನ್ಸರ್‌ ನೋವು ನಿವಾರಕ ಔಷಧವನ್ನೂ ಕೆಲವರು ಕದ್ದು–ಮುಚ್ಚಿ ಅಮಲು ಪದಾರ್ಥವಾಗಿ ಬಳಸುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.

ಡೆಕ್ಸ್‌ಟ್ರೊಪ್ರೊಪಾಕ್ಸಿಫೆನ್‌ ಎಂಬ ಔಷಧ ಕ್ಯಾನ್ಸರ್‌ ರೋಗಿಗಳಿಗೆ ನೋವು ನಿವಾರಣೆಗೆಂದು ನೀಡಲಾಗುತ್ತದೆ. ಇದರ ಮಾರಾಟದ ಮೇಲೆ ಇದ್ದ ನಿರ್ಬಂಧವನ್ನು ಮದ್ರಾಸ್‌ ಹೈಕೋರ್ಟ್‌ ತೆರವುಗೊಳಿಸಿತ್ತು.

ಆ ಬಳಿಕ ಔಷಧದ ಉತ್ಪಾದಕರು, ಇದು ಕ್ಯಾನ್ಸರ್‌ ನೋವು ನಿವಾರಣೆಬಳಕೆಗಾಗಿ ಮಾತ್ರ, ಪ್ರತಿ ದಿನ 300 ಮಿಲಿ ಗ್ರಾಂಗಿಂತ ಹೆಚ್ಚು ಬಳಸಬಾರದು ಎಂಬ ಒಕ್ಕಣೆ ಮುದ್ರಿಸಿ ಮಾರಾಟಕ್ಕೆ ಬಿಡುಗಡೆ ಮಾಡಿದ್ದಾರೆ. ಆದರೂ ಮಾದಕ ವ್ಯಸನಿಗಳು ಇದನ್ನು ಬಳಸುತ್ತಾರೆ.

ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ  ಬಿಜೆಪಿ ತಾರಾ ಅನೂರಾಧ ಅವರು ಸೈಕೊಟ್ರೋಪಿಕ್‌ ವಸ್ತುಗಳನ್ನು ಒಳಗೊಂಡ ಔಷಧ ಮಾರಾಟದ ಕುರಿತ ಪ್ರಶ್ನೆಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಈ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !