ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸಕ್ಕೆ ಕರೆದು ವೇಶ್ಯಾವಾಟಿಕೆಗೆ ತಳ್ಳಿದ ಮೂವರ ಬಂಧನ

Last Updated 31 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಹೊರ ರಾಜ್ಯಗಳಿಂದ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸೋಲದೇವನಹಳ್ಳಿ ಚಿಕ್ಕಸಂದ್ರದ ಮನೆಯೊಂದರ ಮೇಲೆ ಶನಿವಾರ ಮಧ್ಯಾಹ್ನ ದಾಳಿ ನಡೆಸಿದ ಪೊಲೀಸರು, ಹಾಸನದ ದೀಪಕ್ (30), ಮೈಸೂರಿನ ಕಾಶಿ (21) ಹಾಗೂ ಮಂಡ್ಯದ ಪ್ರಜ್ವಲ್‌ನನ್ನು (21) ಬಂಧಿಸಿದ್ದಾರೆ. ಮನೆಯಲ್ಲಿದ್ದ ಮೂವರು ಯುವತಿಯರಿಗೆ ಬುದ್ಧಿ ಹೇಳಿ, ತವರು ರಾಜ್ಯಗಳಿಗೆ ಕಳುಹಿಸಿದ್ದಾರೆ.

ಮೊದಲು ಹಾಸನದಲ್ಲಿ ದಂಧೆ ನಡೆಸುತ್ತಿದ್ದ ದೀಪಕ್, ವರ್ಷದ ಹಿಂದೆ ನಗರಕ್ಕೆ ಬಂದು ಚಿಕ್ಕಸಂದ್ರದಲ್ಲಿ ಬಾಡಿಗೆ ಮನೆ ಮಾಡಿದ್ದ.

ಪರಿಚಿತ ಗಿರಾಕಿಗಳನ್ನು ಮನೆಗೆ ಕರೆಸಿಕೊಂಡು ಅಕ್ರಮ ಸಂಪಾದನೆ ಮಾಡುತ್ತಿದ್ದ. ಬಂಧಿತರಿಂದ ₹ 3,500 ಸಾವಿರ ನಗದು, 4 ಮೊಬೈಲ್‌ ಹಾಗೂ 8 ಕಾಂಡೋಮ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT