‘ಮೋದಿ ಬಜೆಟ್‌ಗೆ ಅಭಿನಂದನಾ ಸಮಾರಂಭ ಇಂದು’

7

‘ಮೋದಿ ಬಜೆಟ್‌ಗೆ ಅಭಿನಂದನಾ ಸಮಾರಂಭ ಇಂದು’

Published:
Updated:

ಬೆಂಗಳೂರು: ಬಿಜೆಪಿ ರೈತ ಮೋರ್ಚಾ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಮೋದಿ ಬಜೆಟ್‌ ಅಭಿನಂದನಾ ಸಮಾರಂಭ ಆಯೋಜಿಸಿದೆ.

ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಸವದಿ ಈ ವಿಷಯ ತಿಳಿಸಿದರು.

ಇದೇ 18 ರಂದು ರಾಜ್ಯದ ನಾಲ್ಕು ಸಾವಿರ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿ ಗೋಪೂಜೆ ನಡೆಸಲಾಗುವುದು. ಮೋದಿ ನೇತೃತ್ವದ  ಕೇಂದ್ರ ಸರ್ಕಾರ ರೈತರಿಗೆ ನೀಡಿದ ಕೊಡುಗೆಗಳನ್ನು ಕೃಷಿಕರು ಮತ್ತು ರೈತರಿಗೆ ತಿಳಿಸಲು ರೈತ ಮೋರ್ಚಾ ಪದಾಧಿಕಾರಿಗಳು 10 ತಂಡಗಳಲ್ಲಿ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಲು ಸೋಮವಾರ ನಡೆದ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ತೀರ್ಮಾನಿಸಲಾಯಿತು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !