ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಮಾಡಿ ಘಾಟ್: ದುರಸ್ತಿಗೆ ಮೂರ್ನಾಲ್ಕು ತಿಂಗಳು

Last Updated 12 ಆಗಸ್ಟ್ 2019, 19:28 IST
ಅಕ್ಷರ ಗಾತ್ರ

ಬೆಳ್ತಂಗಡಿ: ಕಡೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಚಾರ್ಮಾಡಿ ಘಾಟಿ ರಸ್ತೆ ಮತ್ತೆ ಎಂದಿನಂತಾಗಬೇಕಾದರೆ ಮೂರು- ನಾಲ್ಕು ತಿಂಗಳೇ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಕಳೆದ ಬಾರಿಯ ಮಳೆಗಾಲದಲ್ಲೇ ಅಲ್ಲಲ್ಲಿ ಗುಡ್ಡ ಕುಸಿತ ಕಂಡು ಬಂದು ಅಗ್ಗಾಗ್ಗೆ ಸಂಪರ್ಕ ಬಂದ್ ಆಗುತ್ತಿತ್ತು. ಈ ಬಾರಿಯೂ ಅದೇ ರೀತಿ ಆಗುತ್ತಿದೆ. ಆದರೆ ಈ ಸಲ ಅಲ್ಲಲ್ಲಿ ಭಾರೀ ಕುಸಿತಗಳೇ ಕಂಡು ಬಂದಿದ್ದು, ಅದನ್ನು ದುರಸ್ತಿ ಮಾಡಲು ಹಲವು ತಿಂಗಳೇ ಬೇಕಾಗ
ಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ಚಾರ್ಮಾಡಿ ಘಾಟ್‍ನಲ್ಲಿ 11 ಹೇರ್‌ಪಿನ್ ತಿರುವುಗಳಿದ್ದು, 3ನೇ ತಿರುವಿನಿಂದ 11 ತಿರುವಿನವರೆಗೂ ಹಾನಿಯಾಗಿದೆ. 7 ಕಡೆಗಳಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿದಿದ್ದು, 3 ಕಡೆಗಳಲ್ಲಿ ಬೃಹತ್ ಕಲ್ಲು, ಮಣ್ಣು ರಸ್ತೆಗುರುಳಿ ಸಂಪರ್ಕ ಬಂದ್‌ ಆಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಅರಣ್ಯ ಇಲಾಖಾ ಸಿಬ್ಬಂದಿ ಉಪಸ್ಥಿತಿಯಲ್ಲಿ ಮಣ್ಣು, ಕಲ್ಲು ತೆರವು ಕಾರ್ಯ ನಿರಂತರ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT