ಸೋಮವಾರ, ಅಕ್ಟೋಬರ್ 21, 2019
24 °C

ಇಡ್ಲಿ ತಟ್ಟೆ ರಂಧ್ರದಲ್ಲಿ ಬೆರಳು ಸಿಲುಕಿ ಒದ್ದಾಡಿದ ಮಗು

Published:
Updated:
Prajavani

ಬೆಂಗಳೂರು: ಇಡ್ಲಿ ತಟ್ಟೆ ಹಿಡಿದು ಆಟವಾಡುತ್ತಿದ್ದ 18 ತಿಂಗಳ ಮಗುವಿನ ಬೆರಳು ತಟ್ಟೆಯ ರಂಧ್ರದಲ್ಲಿ ಸಿಲುಕಿಕೊಂಡು ನರಳಿದ ಘಟನೆ ಮಾರತಹಳ್ಳಿಯಲ್ಲಿ ನಡೆದಿದೆ. ಮಗುವಿನ ಬೆರಳನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ರೈನ್ ಬೊ ಮಕ್ಕಳ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. 

ಇಡ್ಲಿತಟ್ಟೆ ರಂಧ್ರದಲ್ಲಿ ಸಿಲುಕಿಕೊಂಡಿದ್ದ ಎಡಗೈ ತೋರು ಬೆರಳು ಹೊರತೆಗೆಯಲು ಪ್ರಯತ್ನಿಸಿದ ಪೋಷಕರು ವಿಫಲರಾದರು. ಬೆರಳು ಊದಿಕೊಂಡು, ರಕ್ತಸ್ರಾವ ಆಗುತ್ತಿತ್ತು. ನೋವಿನಿಂದ ಮಗು ಅಳಲಾರಂಭಿಸಿತ್ತು. ಬಳಿಕ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.

ವೈದ್ಯರು ಸ್ಟೀಲ್ ಕತ್ತರಿಸುವ ಯಂತ್ರ ಬಳಸಿ ಸತತ ಒಂದು ಗಂಟೆಯ ಪ್ರಯತ್ನದ ನಂತರ ತಟ್ಟೆ ಕತ್ತರಿಸಿ ಬಿಡಿಸಿದರು.

‘ಈ ಪ್ರಕ್ರಿಯೆ ಸಂಕೀರ್ಣವಾಗಿತ್ತು. ರಂಧ್ರದ ಅಂಚು ತುಂಬಾ ಮೊನಚಾಗಿದ್ದು, ಬೆರಳಿಗೆ ಹಾನಿಯಾಗುವ ಅಪಾಯ ಇತ್ತು. ಹೀಗಾಗಿ ತಟ್ಟೆಯನ್ನೇ ಕತ್ತರಿಸಿದೆವು’ ಎಂದು ಡಾ. ಗಿರೀಶ್ ತಿಳಿಸಿದರು.

Post Comments (+)