ಕಾರುಗಳ ಅಂದಕ್ಕೆ ಮಾರು ಹೋದ ಚಿಣ್ಣರು

7

ಕಾರುಗಳ ಅಂದಕ್ಕೆ ಮಾರು ಹೋದ ಚಿಣ್ಣರು

Published:
Updated:
Deccan Herald

ಬೆಂಗಳೂರು: ಬ್ರಿಟಿಷರ ಕಾಲದ, ರಾಜ ಮಹಾರಾಜರ ಕಾಲದ ಕಾರುಗಳನ್ನು ನೋಡುವುದೇ ಒಂದು ಸಂಭ್ರಮ. ಆಕರ್ಷಕ ವಿನ್ಯಾಸದ ವಿಂಟೇಜ್‌ ಕಾರುಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಚಿಣ್ಣರ ಪಾಲಿಗೆ ಭಾನುವಾರ ಒದಗಿಬಂದಿತ್ತು.

ಮಕ್ಕಳ ಹಬ್ಬದ ಪ್ರಯುಕ್ತ ಕಬ್ಬನ್‌ ಉದ್ಯಾನದಲ್ಲಿ ಭಾನುವಾರ ನಡೆದ ಈ ಪ್ರದರ್ಶನವನ್ನು ಸಾವಿರಾರು ಮಂದಿ ವೀಕ್ಷಿಸಿದರು. ಈ ಅಪರೂಪದ ಕಾರುಗಳ ಪ್ರದರ್ಶನ ಏರ್ಪಡಿಸಿದ್ದು ಫೆಡರೇಷನ್‌ ಆಫ್‌ ಹಿಸ್ಟಾರಿಕಲ್‌ ವೆಹಿಕಲ್ಸ್‌ ಆಫ್‌ ಇಂಡಿಯಾ ಸಂಸ್ಥೆ. 

ಈ ಕಾರುಗಳನ್ನು ಮಕ್ಕಳು ಕಣ್‌ ಕಣ್‌ ಬಿಟ್ಟು ನೋಡಿದರು. ಅವುಗಳ ಎದುರು ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಪೋಷಕರು ಹಾಗೂ ಯುವಜನರೂ ಈ ಕಾರುಗಳ ಮುಂದೆ ಸೆಲ್ಫಿಗೆ ಮುಖವೊಡ್ಡಿದರು. 

‘ಮಕ್ಕಳ ದಿನಾಚರಣೆ ನಿಮಿತ್ತ, ಮಕ್ಕಳ ಹಬ್ಬಕ್ಕಾಗಿಯೇ 60ರಿಂದ 100 ವರ್ಷಗಳಷ್ಟು ಹಳೆಯ ಕಾರುಗಳು ಹಾಗೂ ಮೋಟರ್‌ ಸೈಕಲ್‌ಗಳನ್ನು ಉದ್ಯಾನದ ಜಯಚಾಮರಾಜ ಒಡೆಯರ್‌ ಪ್ರತಿಮೆಯ ಎದುರು ನಿಲ್ಲಿಸಲಾಗಿತ್ತು. ಐತಿಹಾಸಿಕ ಕಾರುಗಳ ಮೂಲಕ ಮಕ್ಕಳು ಇತಿಹಾಸವನ್ನು ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಿದ್ದೇವೆ. ಇದರ ಹಿಂದೆ 4 ದಿನಗಳ ಶ್ರಮ ಇದೆ’ ಎಂದು ಫೆಡರೇಷನ್‌ನ ಅಧ್ಯಕ್ಷ ಡಾ. ರವಿಪ್ರಕಾಶ್‌ ತಿಳಿಸಿದರು.   

‘ವೃತ್ತಿಯಲ್ಲಿ ವೈದ್ಯನಾಗಿದ್ದರೂ, ಐತಿಹಾಸಿಕ ಕಾರುಗಳನ್ನು ಸಂಗ್ರಹಿಸುವುದು ನನ್ನ ಹವ್ಯಾಸ. ಸುಮಾರು 40 ವರ್ಷಗಳಿಂದ ಇಂತಹ ಕಾರುಗಳನ್ನು ಸಂಗ್ರಹಿಸುತ್ತಿದ್ದೇನೆ. 1886ರ ಬೆಂಜ್‌ ಪೇಟೆಂಟ್‌ ವ್ಯಾಗನ್‌ನಿಂದ ಹಿಡಿದು, ಜಯಚಾಮರಾಜ ಒಡೆಯರ್‌ ಮುಂತಾದ ರಾಜರು, ಜವಾಹರಲಾಲ್‌ ನೆಹರೂ, ಕುವೆಂಪು ಅವರಂತಹ ಮಹನೀಯರು ಬಳಸಿದ ಕಾರುಗಳು ನಮ್ಮ ಸಂಗ್ರಹದಲ್ಲಿವೆ’ ಎಂದು ಅವರು ಮಾಹಿತಿ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !