ಮುಖ್ಯಮಂತ್ರಿಯಿಂದ ಎನ್‌ಪಿಎಸ್‌ ರದ್ದು ಭರವಸೆ: ಎಚ್‌.ಕೆ. ರಾಮು

7

ಮುಖ್ಯಮಂತ್ರಿಯಿಂದ ಎನ್‌ಪಿಎಸ್‌ ರದ್ದು ಭರವಸೆ: ಎಚ್‌.ಕೆ. ರಾಮು

Published:
Updated:

ರಾಯಚೂರು: ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಗೊಳಿಸುವ ಸಂಬಂಧವಾಗಿ ಅದರ ಸಾಧಕ, ಬಾಧಕಗಳನ್ನು ಅಧ್ಯಯನ ಮಾಡುವುದಕ್ಕೆ ಉಪಸಮಿತಿಯೊಂದನ್ನು ರಚಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ರಾಮು ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರನೇ ವೇತನ ಆಯೋಗದ ಶಿಫಾರಸಿನಂತೆ ಶೇ 30 ರಷ್ಟು ವೇತನ ಹೆಚ್ಚಿಸಿ ಮೂಲವೇತನದಲ್ಲಿ ಪಾವತಿಸಲಾತ್ತಿದೆ. ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನೌಕರರ ಸಂಘವು ಅಭಿನಂದಿಸುತ್ತದೆ ಎಂದರು.

ನೂತನ ಪಿಂಚಣಿ ಯೋಜನೆಯಡಿ ಆಯಾ ರಾಜ್ಯಗಳೆ ಪಿಂಚಣಿ ಭರಿಸುವುದಕ್ಕೆ ಕೇಂದ್ರವು ಸೂಚಿಸಿರುವುದರಿಂದ ರಾಜ್ಯ ಸರ್ಕಾರವೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ದೆಹಲಿ, ಆಂಧ್ರಪ್ರದೇಶ ರಾಜ್ಯಗಳನ್ನು ಈಗಾಗಲೇ ಎನ್‌ಪಿಎಸ್‌ ವಿರೋಧಿಸಿವೆ. ಕೇರಳ ಮತ್ತು ತೆಲಂಗಾಣ ರಾಜ್ಯಗಳು ಕಾಲಮಿತಿಯಲ್ಲಿ ಪರಿಶೀಲನೆ ನಡೆಸುವ ಭರವಸೆಯನ್ನು ನೌಕರರ ಸಂಘಕ್ಕೆ ನೀಡಿವೆ ಎಂದು ತಿಳಿಸಿದರು.

ಎಂ.ಆರ್‌. ಶ್ರೀನಿವಾಸ ನೇತೃತ್ವದ ಸಮಿತಿಯು ತನ್ನ ಎರಡನೇ ವರದಿಯನ್ನು ಸಲ್ಲಿಸಿದೆ. ಪಿಯು ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸುವ ಭರವಸೆಯನ್ನು ಸರ್ಕಾರ ನೀಡಿದೆ. ರಾಜ್ಯದಲ್ಲಿ ಖಾಲಿ ಉಳಿದ 2.15 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಒತ್ತಡ ಹಾಕಲಾಗಿದೆ. ವರ್ಗಾವಣೆಯಲ್ಲಿರುವ ಗೊಂದಲದ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.

ಪಿಯು ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ತಿಮ್ಮಣ್ಣ ಪುರ್ಲೆ, ನಾರಾಯಣಸ್ವಾಮಿ, ಮಹಿಬೂಬಪಾಷಾ ಮೂಲಿಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸೈಯದ್‌ ಸಿರಾಜ್‌, ನರಸಪ್ಪ ಭಂಡಾರಿ, ಬಂದೇನವಾಜ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !