ಸೋಮವಾರ, ಸೆಪ್ಟೆಂಬರ್ 23, 2019
24 °C
ಆರ್‌ಟಿಇ ಪರ ಹೋರಾಟ ಸಂಘದಿಂದ ಮುಖ್ಯಮಂತ್ರಿ ಭೇಟಿ

ಅಮೆರಿಕದಲ್ಲಿ 5ನೇ ಕನ್ನಡ ಸಮ್ಮೇಳನ

Published:
Updated:

ಬೆಂಗಳೂರು: ‘ನಾವಿಕ(ಉತ್ತರ ಅಮೆರಿಕ ವಿಶ್ವ ಕನ್ನಡಿಗರ ಆಗರ) ಸಂಸ್ಥೆಯಿಂದ ಅಮೆರಿಕದಲ್ಲಿ ಆ.30 ರಿಂದ ಸೆಪ್ಟಂಬರ್‌ 1ರವರೆಗೆ 5ನೇ ವಿಶ್ವ ಕನ್ನಡ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಕಿರುತೆರೆ ನಟಿ ಯಮುನಾ ಶ್ರೀನಿಧಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಮ್ಮೇಳನದಲ್ಲಿ ಗಾಯಕರಾದ ವಿಜಯಪ್ರಕಾಶ್‌, ರಾಜೇಶ್‌ ಕೃಷ್ಣನ್‌, ಹೇಮಂತ್‌, ಅನುರಾಧ ಭಟ್ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕವಿಗೋಷ್ಠಿಯಲ್ಲಿ ಪ್ರೊ.ಕೆ.ಎಸ್‌ ನಿಸಾರ್ ಅಹಮ್ಮದ್‌, ಸಿದ್ಧಲಿಂಗಯ್ಯ, ಮೈಸೂರು ನಟರಾಜ್‌ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಒಟ್ಟು ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಪಿಟೀಲು ವಾದಕ ಅನೀಶ್‌ ವಿದ್ಯಾಶಂಕರ್‌ ಭಾಗವಹಿಸಲಿದ್ದಾರೆ. ಹರಟೆ ಕಾರ್ಯಕ್ರಮ, ವೈದ್ಯಕೀಯ, ವ್ಯಾಪಾರ, ಆಧ್ಯಾತ್ಮಿಕ ಮತ್ತು ಮಹಿಳಾ ವಿಚಾರ ಗೋಷ್ಠಿಗಳು ಮತ್ತು ಯೋಗ ತರಬೇತಿಗಳು ನಡೆಯಲಿವೆ ಎಂದರು.

Post Comments (+)