ಟೆಂಡರ್‌ಗೆ ವಿನಾಯಿತಿ

ಭಾನುವಾರ, ಏಪ್ರಿಲ್ 21, 2019
26 °C

ಟೆಂಡರ್‌ಗೆ ವಿನಾಯಿತಿ

Published:
Updated:

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಗಿದ ಬಳಿಕ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳು, ಸರಕು ಮತ್ತು ಸೇವೆಗಳ ಖರೀದಿಗೆ ಸಂಬಂ ಧಿಸಿದಂತೆ ಟೆಂಡರ್ ಕರೆಯಬಹುದು ಮತ್ತು ಅವುಗಳನ್ನು ಅಂತಿಮಗೊಳಿಸಿ ಕಾರ್ಯಾ ದೇಶ ನೀಡಬಹುದು ಎಂದು ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗ ವಿನಾಯಿತಿ ನೀಡಿದೆ.

ಮಾದರಿ ನೀತಿಸಂಹಿತೆಯಿಂದ ವಿನಾಯಿತಿ ಕೋರಿ ಬಾಕಿ ಇರುವ ಟೆಂಡರ್‌ ಪ್ರಸ್ತಾವಗಳನ್ನು ಪರಿಶೀಲನಾ ಸಮಿತಿಯ ಮುಂದೆ ಮಂಡಿಸುವ ಬದಲು, ಏಪ್ರಿಲ್‌ 23ರ ನಂತರ ಸಕ್ಷಮ ಪ್ರಾಧಿಕಾರಗಳು ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಸುತ್ತೋಲೆ ಹೊರಡಿಸಿದ್ದಾರೆ.

ಇದರಿಂದಾಗಿ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು 23ರ ನಂತರ ಟೆಂಡರ್‌ ಕರೆಯಬಹುದು. ಚುನಾವಣೆಯ ಮಾದರಿ ನೀತಿ ಸಂಹಿತೆ ಮಾರ್ಚ್‌ 10ರಂದು ಜಾರಿಗೆ ಬಂದಿದೆ. ಇದು ಮತ ಎಣಿಕೆ ಮುಗಿಯುವ ದಿನದವರೆಗೆ ಜಾರಿಯಲ್ಲಿರುತ್ತದೆ. ತುರ್ತು ಕಾಮಗಾರಿಗಳಿಗೆ ವಿನಾಯಿತಿ ಪಡೆಯಲು ಪರಿಶೀಲನಾ ಸಮಿತಿಯ ಪ್ರಸ್ತಾವ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿತ್ತು. ಮತದಾನ ಮುಗಿದ ಬಳಿಕ ಟೆಂಡರ್‌ಗಳನ್ನು ಕರೆಯಲು ವಿನಾಯಿತಿ ನೀಡಬೇಕು ಎಂದು ಪರಿಶೀಲನಾ ಸಮಿತಿ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಆಯೋಗ ಸಮ್ಮತಿ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !