ಆವರಿಸಿದ ಮೌನ, ಒದ್ದೆಯಾದ ಕಣ್ಣಾಲೆ

ಶುಕ್ರವಾರ, ಮೇ 24, 2019
23 °C

ಆವರಿಸಿದ ಮೌನ, ಒದ್ದೆಯಾದ ಕಣ್ಣಾಲೆ

Published:
Updated:
Prajavani

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಸಂಘದಿಂದ ರಾಷ್ಟ್ರೀಯ ಮಿಲಿಟರಿ ಸ್ಮಾರಕ ಉದ್ಯಾನದಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿ ಪೋರಾದಲ್ಲಿ ಉಗ್ರರ ದಾಳಿಯಲ್ಲಿ ಹುತ್ಮಾತರಾದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಉದ್ಯಾನದ ಹುತಾತ್ಮ ಯೋಧನ ಪ್ರತಿಮೆ ಮುಂದೆ ಜಮಾಯಿಸಿದ ಜನ ಮೋಂಬತ್ತಿ ಬೆಳಗುವ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಿದರು. ನೂರಾರು ಸಂಖ್ಯೆಯ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಭಾಗವಹಿಸಿದ್ದರು. ಗೌರವ ಸಲ್ಲಿಸುವ ಸಂದರ್ಭ
ದಲ್ಲಿ ಒಂದು ಕ್ಷಣ ಮೌನ ಆವರಿಸಿ, ಅಲ್ಲಿ ಜಮಾಯಿಸಿದ್ದವರ ಕಣ್ಣಾಲೆಗಳು ಒದ್ದೆಯಾದವು. 

ಸೇನೆಯೊಂದಿಗೆ ನಾವಿದ್ದೇವೆ ಎನ್ನುವ ಫಲಕಗಳನ್ನು ಪ್ರದರ್ಶಿಸುವ ಮೂಲಕ ಸೈನಿಕರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದರು. ಭಾರತ್ ಮಾತಾಕಿ ಜೈ, ವಂದೇ ಮಾತರಂ ಘೋಷಣೆಗಳು ಮೊಳಗಿದವು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ,‘ಸೈನಿಕರ ಮೇಲಿನ ದಾಳಿ ಪೈಶಾಚಿಕವಾದದ್ದು. ಸಣ್ಣತನದ ಕೆಲಸ. ಪ್ರತಿಯೊಬ್ಬರು ಇದನ್ನು ಖಂಡಿಸಬೇಕು. ಹುತಾತ್ಮ ಸೈನಿಕರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಬೇಕು. ಗುಪ್ತಚರ ಇಲಾಖೆಯವರು ಇಂತಹ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು’ ಎಂದು ತಿಳಿಸಿದರು.

‘ಶಾಂತಿ ಕಾಪಾಡುವುದಕ್ಕೆ ಸೇನೆಗೆ ಸಂಪೂರ್ಣ ಅಧಿಕಾರ ಕೊಡುವ ಮೂಲಕ ಸರ್ಕಾರ ಒಳ್ಳೆ ಕೆಲಸ ಮಾಡಿದೆ.  ಆದರೆ ಅದು ಬಹಳ ದಿನ ಮುಂದುವರೆಯಬಾರದು. ಶಾಂತಿ ನೆಲೆಸುವವರಿಗೆ ಮಾತ್ರ ಇರಬೇಕು’ ಎಂದು ಅವರು ಹೇಳಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !