ಗುರುವಾರ , ಅಕ್ಟೋಬರ್ 17, 2019
21 °C

ಪ್ರೀತಿಸುವಂತೆ ಬೆದರಿಕೆ: ಮಹಿಳಾ ಕಾನ್‌ಸ್ಟೆಬಲ್‌ ದೂರು!

Published:
Updated:

ಬೆಂಗಳೂರು: ‘ಪ್ರೀತಿಸುವಂತೆ ಕಾನ್‌ಸ್ಟೆಬಲ್‌ ಬೆದರಿಕೆ ಹಾಕುತ್ತಿದ್ದಾನೆ’ ಎಂದು ಆರೋಪಿಸಿ ಅಶೋಕ್‍ನಗರ ಪೊಲೀಸ್‌ ಠಾಣೆಗೆ ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರು ದೂರು ನೀಡಿದ್ದಾರೆ.

ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಮಹಿಳಾ ಕಾನ್‌ಸ್ಟೆಬಲ್‌ ನೀಡಿದ ದೂರಿನ ಆಧಾರದಲ್ಲಿ ಕಾನ್‌ಸ್ಟೆಬಲ್‌ ಸಂತೋಷ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘ವಿವೇಕನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್‌ ಪ್ರೇಮ ನಿವೇದನೆ ಮಾಡಿದ್ದ. ನಮ್ಮ ಪ್ರೀತಿಗೆ ಸಂತೋಷ್ ಮನೆಯವರು ಒಪ್ಪದಿದ್ದಾಗ ಸಂತೋಷ್ ಜತೆ ಮಾತನಾಡುವುದನ್ನು ಬಿಟ್ಟಿದ್ದೆ’ ಎಂದು ಮಹಿಳಾ ಕಾನ್‌ಸ್ಟೆಬಲ್‌ ದೂರಿನಲ್ಲಿ ಹೇಳಿದ್ದಾರೆ.

‘ಆದರೆ, ಹಿಂಬಾಲಿಸುತ್ತಿರುವ ಸಂತೋಷ್, ಪ್ರೀತಿಸುವಂತೆ ಬೆದರಿಸುತ್ತಿದ್ದ. ಅಲ್ಲದೆ, ಅ. 5ರಂದು ಬೆಳಿಗ್ಗೆ ಏಳು ಗಂಟೆಗೆ ಕುಡಿದು ಮನೆ ಎದುರು ಬಂದು ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿದ್ದಾನೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

Post Comments (+)