ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮಳೆ: ಸಂಚಾರಕ್ಕೆ ಅಡ್ಡಿ

ಕೆಲವೆಡೆ 21ರವರೆಗೆ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ
Last Updated 19 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೇಂದ್ರ ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಕೂಡ ಭಾರಿ ಮಳೆ ಸುರಿದಿದೆ.

ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

ನಗರದ ಕೆಲವು ಭಾಗಗಳಲ್ಲಿ ಇದೇ 21ರವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಬೊಮ್ಮನಹಳ್ಳಿಯ ಬೇಗೂರು ವಾರ್ಡ್‌ ಮತ್ತು ಸುಭಾಷ್‍ ನಗರದ ಕೆಲವು ಕಡೆ ನೀರು ನಿಂತ ಕಾರಣ ಜನರು ಪರದಾಡಬೇಕಾಯಿತು.

ಸುಭಾಷ್‌ ನಗರದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಇದ್ದ ಒಳಚರಂಡಿ ಉಕ್ಕಿ ಹರಿದು ಮನೆಯೊಂದಕ್ಕೆ ನೀರು ನುಗ್ಗಿತ್ತು.
ಭಾನುವಾರವೂ ಒಳಚರಂಡಿ ನೀರು ಅದೇ ಮನೆಯ ಶೌಚಾಲಯದಲ್ಲಿ ಉಕ್ಕಿ ಹರಿದಿತ್ತು.

ಸ್ಥಳೀಯರು ದೂರು ನೀಡಿದ ಬಳಿಕ ಸ್ಥಳಕ್ಕೆ ತಲುಪಿದ ಬಿಬಿಎಂಪಿ ಸಿಬ್ಬಂದಿ ನೀರು ಹೊರಗೆ ಹಾಕಿದರು. ಈ ಜಾಗ ಇಳಿಜಾರಿನಲ್ಲಿ ಇರುವುದರಿಂದ ಸರಾಗವಾಗಿ ನೀರು ಹರಿದು ಹೋಗುತ್ತಿದೆ. ಒಳಚರಂಡಿ ಸ್ವಚ್ಛ ಮಾಡಿಸುವ ಜೊತೆಗೆ ಮನೆ ಮುಂಭಾಗವನ್ನು ಎತ್ತರ ಮಾಡುವಂತೆ ತಿಳಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.

ಸಿದ್ದನ ಹೊಸಹಳ್ಳಿಯಲ್ಲಿ ಅತಿ ಹೆಚ್ಚು 68 ಮಿ.ಮೀ. ಮಳೆ ಆಗಿದೆ.

ಉಳಿದಂತೆ, ದಾಸನಪುರ 56 ಮಿ.ಮೀ., ಮಾದನಾಯಕನಹಳ್ಳಿ 54 ಮಿ.ಮೀ., ಆಲೂರು 48 ಮಿ.ಮೀ., ಶೆಟ್ಟಿಹಳ್ಳಿ, ಹೆಗ್ಗನಹಳ್ಳಿ, ಸಾರಕ್ಕಿ 47 ಮಿ.ಮೀ., ಚಿಕ್ಕಬಿದಿರಕಲ್ಲು 46 ಮಿ.ಮೀ., ದೊಡ್ಡಬಿದಿರಕಲ್ಲು 38 ಮಿ.ಮೀ., ಯಲಹಂಕ 37 ಮಿ.ಮೀ., ದೊಡ್ಡಬೊಮ್ಮಸಂದ್ರ 35 ಮಿ.ಮೀ., ಕೋಣನಕುಂಟೆ, ಪೀಣ್ಯ ಕೈಗಾರಿಕಾ ಪ್ರದೇಶ 32 ಮಿ.ಮೀ., ದೊರೆಸಾನಿಪಾಳ್ಯ 29 ಮಿ.ಮೀ., ಅಗ್ರಹಾರ ದಾಸರಹಳ್ಳಿ, ಸೋಮಶೆಟ್ಟಿಹಳ್ಳಿ 27 ಮಿ.ಮೀ., ಎಚ್.ಗೊಲ್ಲಹಳ್ಳಿ, ವಡೇರಹಳ್ಳಿ, ಬಿಳೇಕಹಳ್ಳಿ 24 ಮಿ.ಮೀ., ವಿದ್ಯಾರಣ್ಯಪುರ, ಹೆಮ್ಮಿಗೆಪುರ 23 ಮಿ.ಮೀ., ಕಸಘಟ್ಟಪುರ 22 ಮಿ.ಮೀ., ಹೇರೋಹಳ್ಳಿ 21 ಮಿ.ಮೀ. ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT