ಚೆಕ್‌ ಬೌನ್ಸ್‌ : ಚಿಂಚನಸೂರ್‌ಗೆ ಜಾಮೀನುರಹಿತ ವಾರಂಟ್

ಶನಿವಾರ, ಏಪ್ರಿಲ್ 20, 2019
24 °C
ಚೆಕ್‌ ಬೌನ್ಸ್‌ ಪ್ರಕರಣದ ವಿಚಾರಣೆಗೆ ಗೈರು

ಚೆಕ್‌ ಬೌನ್ಸ್‌ : ಚಿಂಚನಸೂರ್‌ಗೆ ಜಾಮೀನುರಹಿತ ವಾರಂಟ್

Published:
Updated:
Prajavani

ಬೆಂಗಳೂರು: ಚೆಕ್‌ ಬೌನ್ಸ್‌ ಪ್ರಕರಣದ ವಿಚಾರಣೆಗೆ ಗೈರು ಹಾಜರಾದ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌ ಅವರಿಗೆ ಇಲ್ಲಿನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ಜಾಮೀನುರಹಿತ ವಾರಂಟ್‌ ಹೊರಡಿಸಿದೆ.

ಚಿಂಚನಸೂರ್‌ 2011ರಲ್ಲಿ ನಾಗರಬಾವಿ ನಿವಾಸಿ ಅಂಜನಾ ಶಾಂತವೀರ್‌ ಅವರಿಂದ ₹ 11.88 ಕೋಟಿ ಸಾಲ ಪಡೆದಿದ್ದರು. ಸಾಲಕ್ಕೆ ವಾರ್ಷಿಕ ಶೇ 12ರಷ್ಟು ಬಡ್ಡಿ ಕೊಡಲು ಒಪ್ಪಿದ್ದರು.

ಪೂರ್ಣ ಸಾಲದ ಹಣಕ್ಕೆ 2015ರ ಏಪ್ರಿಲ್‌ 30ರ ದಿನಾಂಕ ನಮೂದಿಸಿ ಚೆಕ್‌ ನೀಡಿದ್ದರು. ಈ ಚೆಕ್‌ ಬೌನ್ಸ್‌ ಆಗಿತ್ತು. ಆನಂತರ, ಮಹಿಳೆ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಈ ಪ್ರಕರಣದ ಸಾಕ್ಷ್ಯ ವಿಚಾರಣೆಗೆ ಚಿಂಚನಸೂರ್‌ ಸೋಮವಾರ ಕೋರ್ಟ್‌ಗೆ ಹಾಜರಾಗಬೇಕಿತ್ತು. ಆದರೆ, ಗೈರಾಗಿದ್ದರು.

ಇದರಿಂದಾಗಿ ಕೋರ್ಟ್ ಅವರ ವಿರುದ್ಧ ಜಾಮೀನುರಹಿತ ವಾರಂಟ್‌ ಹೊರಡಿಸಿ, ಪ್ರಕರಣದ ವಿಚಾರಣೆ ಮುಂದೂಡಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !