ಬುಧವಾರ, ಅಕ್ಟೋಬರ್ 16, 2019
21 °C

ಅಕ್ರಮ ಸಾಗಣೆ: 70 ಕರುಗಳ ರಕ್ಷಣೆ

Published:
Updated:
Prajavani

ಚನ್ನರಾಯಪಟ್ಟಣ: ತಾಲ್ಲೂಕಿನ ಬಂಡಿಹಳ್ಳಿಯ ತೋಟದ ಮನೆಯ ಬಳಿ ಶೆಡ್‌ನಲ್ಲಿ ಅಕ್ರಮವಾಗಿ ಕೂಡಿಹಾಕಿದ್ದ ಹಾಗೂ ಸರಕು ಸಾಗಿಸುವ ವಾಹನದಲ್ಲಿ ಕಸಾಯಿಖಾನೆಗೆ ಸಾಗಿಸಲೆಂದು ಅಕ್ರಮವಾಗಿ ತುಂಬಿಸಿಕೊಂಡಿದ್ದ ಒಟ್ಟು 70 ಕರುಗಳನ್ನು ಶುಕ್ರವಾರ ರಾತ್ರಿ ಪೊಲೀಸರು ರಕ್ಷಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಕರುಗಳನ್ನು ರಕ್ಷಿಸಲಾಯಿತು. ಚಾಲಕ ಪರಾರಿಯಾಗಿದ್ದು ಬಂಡಿಹಳ್ಳಿ ಗ್ರಾಮದ ಲೋಕೇಶ್‌ ವಿರುದ್ಧ ಪ್ರಕರನ ದಾಖಲಿಸಲಾಗಿದ್ದು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕರುಗಳನ್ನು ಮೈಸೂರಿನ ಪಿಂಜಿರಾಪೊಲ್‌ಗೆ ಸಾಗಿಸಲಾಗಿದೆ ಎಂದು ಪಟ್ಟಣ ಠಾಣೆಯ ಪಿಎಸ್‌ಐ ಎಲ್‌.ಎನ್‌.ಕಿರಣ್‌ಕುಮಾರ್‌ ತಿಳಿಸಿದ್ದಾರೆ.

Post Comments (+)