ಕ್ರಿಕೆಟ್ ಬೆಟ್ಟಿಂಗ್: ₹16.43 ಲಕ್ಷ ಜಪ್ತಿ

7

ಕ್ರಿಕೆಟ್ ಬೆಟ್ಟಿಂಗ್: ₹16.43 ಲಕ್ಷ ಜಪ್ತಿ

Published:
Updated:

ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಕ್ರಿಕೆಟ್‌ ಪಂದ್ಯಕ್ಕಾಗಿ ಬೆಟ್ಟಿಂಗ್‌ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಶುಕ್ರವಾರ ಬಂಧಿಸಿರುವ ಸಿಸಿಬಿ ಪೊಲೀಸರು, ₹16.43 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಹೆಮ್ಮಿಗೆಪುರದ ಎಚ್‌.ಆರ್‌.ಮಂಜುನಾಥ್ (32), ಜೆ.ಪಿ. ನಗರದ ಜೆ. ಗೋಪಾಲ್ (45) ಹಾಗೂ ಬಿನ್ನಿ (33) ಬಂಧಿತರು. ತಲಘಟ್ಟಪುರ ಹಾಗೂ ಜೆ.ಪಿ. ನಗರ ಠಾಣೆ ವ್ಯಾಪ್ತಿಯ ಎರಡು ಮನೆಗಳ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದರು.

‘ಹೆಮ್ಮಿಗೆಪುರದ 210 ಸಂಖ್ಯೆಯ ಮನೆಯಲ್ಲಿ ಆರೋಪಿ ಮಂಜುನಾಥ್, ಭಾರತ–ಆಸ್ಟ್ರೇಲಿಯಾ ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಬೆಟ್ಟಿಂಗ್‌ ಕಟ್ಟಿಸಿಕೊಂಡಿದ್ದ. ಆತನ ಮನೆ ಮೇಲೆ ದಾಳಿ ನಡೆಸಿದಾಗ ₹11.05 ಲಕ್ಷ ನಗದು, ಬೆಟ್ಟಿಂಗ್ ವಿವರ ಬರೆದಿದ್ದ ಚೀಟಿ, ಬೆಲೆಬಾಳುವ ಮೊಬೈಲ್ ಸಿಕ್ಕಿದೆ’ ಎಂದರು.

‘ಜೆ.ಪಿ. ನಗರದ 18ನೇ ಮುಖ್ಯರಸ್ತೆಯ 5ನೇ ಅಡ್ಡರಸ್ತೆಯಲ್ಲಿರುವ ಮನೆಯಲ್ಲಿ ಗೋಪಾಲ್ ಹಾಗೂ ಬಿನ್ನಿ, ಬೆಟ್ಟಿಂಗ್‌ ಆಡುತ್ತಿದ್ದರು. ದಾಳಿ ವೇಳೆ ಅವರಿಂದ ₹5.38 ಲಕ್ಷ, ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !