ಕ್ರಿಕೆಟ್‌ ಬೆಟ್ಟಿಂಗ್‌ಗೆ ಪಾರ್ಕಿಂಗ್ ಸ್ಥಳವೇ ಅಡ್ಡೆ

ಶುಕ್ರವಾರ, ಏಪ್ರಿಲ್ 26, 2019
35 °C

ಕ್ರಿಕೆಟ್‌ ಬೆಟ್ಟಿಂಗ್‌ಗೆ ಪಾರ್ಕಿಂಗ್ ಸ್ಥಳವೇ ಅಡ್ಡೆ

Published:
Updated:
Prajavani

ಬೆಂಗಳೂರು: ಕೆ.ಆರ್.ಪುರದ ಎ2ಬಿ ಹೋಟೆಲ್ ಮುಂಭಾಗದಲ್ಲಿರುವ ವಾಹನ ನಿಲುಗಡೆ ಸ್ಥಳವನ್ನೇ ಅಡ್ಡೆ ಮಾಡಿಕೊಂಡು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಡಿ ಎಚ್‌.ವಿ. ಚೌಡೇಗೌಡ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಿತಕನೂರು ಗ್ರಾಮದ ನಿವಾಸಿ ಚೌಡೇಗೌಡ, ಬುಕ್ಕಿ ಕೃಷ್ಣಪ್ಪ ಎಂಬಾತನ ಅಧೀನದಲ್ಲಿ ಬೆಟ್ಟಿಂಗ್‌ ನಡೆಸುತ್ತಿದ್ದ ಎಂದು ಗೊತ್ತಾಗಿದೆ. ಕೃಷ್ಣಪ್ಪ ಸದ್ಯ ತಲೆಮರೆಸಿಕೊಂಡಿದ್ದಾನೆ. 

‘ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಸನ್ ರೈಸರ್ಸ್‌ ಹೈದರಾಬಾದ್ ತಂಡಗಳ ನಡುವೆ ಏಪ್ರಿಲ್ 4ರಂದು ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆಯಲ್ಲಿ ಚೌಡೇಗೌಡ ಬೆಟ್ಟಿಂಗ್‌ ನಡೆಸಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಅವರನ್ನು ಬಂಧಿಸಲಾಯಿತು. ₹ 6 ಲಕ್ಷ ನಗದು ಹಾಗೂ ಎರಡು ಮೊಬೈಲ್‌ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಬುಕ್ಕಿ ಹಾಗೂ ಪಂಟರ್‌ಗಳ ಜೊತೆ ಒಡನಾಟವಿಟ್ಟುಕೊಂಡಿದ್ದ ಆರೋಪಿ, ಮೊಬೈಲ್ ಆ್ಯಪ್‌ಗಳ ಸಹಾಯದಿಂದ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದರು. ಕೆಲ ಸಾರ್ವಜನಿಕರಿಂದ ಹಣ ಪಡೆದುಕೊಂಡು ವಂಚಿಸಿದ್ದರು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !