ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕ ಕೃತ್ಯ ಬೆಂಬಲಿಸಿದವಗೆ ಶೋಧ

Last Updated 15 ಫೆಬ್ರುವರಿ 2019, 19:35 IST
ಅಕ್ಷರ ಗಾತ್ರ

ಬೆಂಗಳೂರು: ‍ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಯನ್ನು ಬೆಂಬಲಿಸಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದ ಅಬಿದ್ ಮಲಿಕ್ ಎಂಬಾತನ ವಿರುದ್ಧ ಎಚ್ಎಎಲ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗುರುವಾರ ದಾಳಿ ನಡೆದ ಸ್ವಲ್ಪ ಹೊತ್ತಿನಲ್ಲೇ ‘ಇದು ನಿಜವಾದ ಸರ್ಜಿಕಲ್ ಸ್ಟ್ರೈಕ್’ ಎಂದು ಪೋಸ್ಟ್ ಹಾಕಿದ್ದ ಅಬಿದ್, ಆತ್ಮಾಹುತಿ ದಾಳಿ ನಡೆಸಿದ್ದ ಉಗ್ರನ ಆತ್ಮಕ್ಕೆ ಶಾಂತಿ ಕೋರಿ ‘RIP Bro’ ಎಂದೂ ಬರೆದಿದ್ದ. ಈ ಬಗ್ಗೆ ಸಾರ್ವಜನಿಕರಿಂದ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಆತ ಪೋಸ್ಟ್‌ಗಳನ್ನು ಅಳಿಸಿದ್ದ. ಪೊಲೀಸರು ಐಪಿ ವಿಳಾಸ ಆಧರಿಸಿ ಅಬಿದ್‌ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಬೆಂಗಳೂರಿನಲ್ಲೇ ಕೆಲಸ: ತಾನು ಬೆಂಗಳೂರಿನ ಕಾಲೇಜಿನಲ್ಲೇ ವ್ಯಾಸಂಗ ಮಾಡಿರುವುದಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅಬಿದ್, ಹೊರಮಾವುವಿನ ‘ಸಗೇಶಿಯಸ್ ಇನ್ಫೋಸಿಸ್ಟಮ್’ ಕಂಪನಿಯಲ್ಲೂ ಮೂರು ತಿಂಗಳು ಕೆಲಸ ಮಾಡಿದ್ದ. ಗುರುವಾರ ರಾತ್ರಿ ಪೊಲೀಸರು ಆ ಕಂಪನಿಗೂ ಹೋಗಿ ನೌಕರರನ್ನು ವಿಚಾರಣೆ ನಡೆಸಿ ಬಂದಿದ್ದಾರೆ.

‘2017ರ ಜುಲೈ 7ರಂದು ಕಂಪನಿ ಸೇರಿದ್ದ ಅಬೀದ್, ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಅದೇ ವರ್ಷದ ಸೆ.22ರಂದು ಹೇಳದೆ–ಕೇಳದೆ ಹೊರಟು ಹೋದ. ಸದ್ಯ ಎಲ್ಲಿದ್ದಾನೆ ಎಂಬುದು ನಮಗೆ ಗೊತ್ತಿಲ್ಲ. ಆದರೆ, ಆತನ ಫೇಸ್‌ಬುಕ್ ಸ್ಟೇಟಸ್ ನೋಡಿ ನಮ್ಮ ರಕ್ತವೂ ಕುದಿಯುತ್ತಿದೆ’ ಎಂದು ಕಂಪನಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.

‘ಯೋಧರನ್ನು ಕಳೆದುಕೊಂಡು ಇಡೀ ದೇಶವೇ ಕಣ್ಣೀರಿಡುತ್ತಿದೆ. ಆದರೆ, ಈ ಪಾಪಿ ದೇಶವಿರೋಧಿ ಸ್ಟೇಟಸ್ ಹಾಕಿದ್ದಾನೆ. ಇಂಥವನಿಗೆ ಕೆಲಸ ಕೊಟ್ಟಿದ್ದೆನಲ್ಲಾ ಎಂದು ತುಂಬ ಬೇಸರವಾಗುತ್ತಿದೆ. ಪೊಲೀಸರು ಆದಷ್ಟು ಬೇಗ ಆತನನ್ನು ಪತ್ತೆ ಮಾಡಿ ಕಠಿಣ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT