‘ಫೈನ್ ಡಸ್ಟ್ ಈಟರ್'ಗೆ ಪ್ರಾಯೋಗಿಕ ಚಾಲನೆ

7

‘ಫೈನ್ ಡಸ್ಟ್ ಈಟರ್'ಗೆ ಪ್ರಾಯೋಗಿಕ ಚಾಲನೆ

Published:
Updated:
Deccan Herald

ಬೆಂಗಳೂರು: ವಾಹನಗಳು ಹೊರಸೂಸುವ ವಿಷಕಾರಿ ದೂಳಿನ ಕಣಗಳನ್ನು ಹೀರಿಕೊಂಡು ಗಾಳಿಯನ್ನು ಶುದ್ಧೀಕರಿಸುವ ‘ಫೈನ್ ಡಸ್ಟ್ ಈಟರ್ (ಸೂಕ್ಷ್ಮ ದೂಳು ಹೀರುವ)’ ಯಂತ್ರಕ್ಕೆ ಕಬ್ಬನ್‍ ಉದ್ಯಾನದಲ್ಲಿ ಗುರುವಾರ ಪ್ರಾಯೋಗಿಕ ಚಾಲನೆ ನೀಡಲಾಯಿತು.

ಲಾಲ್‍ಬಾಗ್ ಮತ್ತು ಕಬ್ಬನ್ ಉದ್ಯಾನವನದ ಸಲಹಾ ಸಮಿತಿ ಅಧ್ಯಕ್ಷ ಎ.ಎನ್.ಯಲ್ಲಪ್ಪ ರೆಡ್ಡಿ, ‘ಯಂತ್ರದ ಕಾರ್ಯಕ್ಷಮತೆ ಕುರಿತು ಮೂರು ತಿಂಗಳವರೆಗೆ ಅಧ್ಯಯನ ನಡೆಸುತ್ತೇವೆ. ಯೋಜನೆ ಯಶಸ್ವಿಯಾದರೆ, ಕಬ್ಬನ್‍ಪಾರ್ಕ್‍ನ ವಿವಿಧೆಡೆ ಮತ್ತು ಲಾಲ್‍ಬಾಗ್‍ನಲ್ಲೂ ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ದು, ಶ್ವಾಸಕೋಶದ ತೊಂದರೆ, ಹೃದ್ರೋಗ ಸೇರಿದಂತೆ ಹಲವು ರೋಗಗಳಿಗೆ ಕಾರಣವಾಗಿದೆ. ನಗರದ ವಾಯು ಗುಣಮಟ್ಟದ ಬಗ್ಗೆ ಸಂಶೋಧನೆ ನಡೆಸಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ವರದಿಗಳನ್ನು ಮಂಡಿಸಿದ್ದೇವೆ. ವಾಯು ಗುಣಮಟ್ಟವನ್ನು ಕಾಪಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ವರದಿಗಳನ್ನು ಸಲ್ಲಿಸಿದ್ದೇವೆ. ಆದರೆ, ಅವುಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !