ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರರಿಂದ ಯಾತ್ರಿ ನಿವಾಸ ಪರಿಶೀಲನೆ

Last Updated 17 ಅಕ್ಟೋಬರ್ 2018, 19:29 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಶಿವಗಂಗೆ ಯಾತ್ರಿ ನಿವಾಸಕ್ಕೆ ನೆಲಮಂಗಲ ತಹಶೀ ಲ್ದಾರ್‌ ಕೆ.ಎನ್.ರಾಜಶೇಖರ್‌ ಬುಧವಾರ ಭೇಟಿ ನೀಡಿ ಕಟ್ಟಡದ ಪರಿಸ್ಥಿತಿ ತಪಾಸಣೆ ಮಾಡಿದರು.

ಪ್ರಜಾವಾಣಿಯ ಬುಧವಾರದ ಸಂಚಿಕೆ ಯಲ್ಲಿ ಯಾತ್ರಿ ನಿವಾಸದ ಬಗ್ಗೆ ’ಇದ್ದೂ ಇಲ್ಲದಂತಾದ ಯಾತ್ರಿ ನಿವಾಸ!’ ಎಂಬ ತಲೆಬರಹದಡಿಯಲ್ಲಿ ವರದಿ ಪ್ರಕಟಿಸಿತ್ತು.

ಯಾತ್ರಿ ನಿವಾಸ ಎರಡು ವರ್ಷಗಳಿಂದ ಉಪಯೋಗಕ್ಕೆ ಬಾರದೆ ಇರುವುದು ಸರಿಯಲ್ಲ. ಅವತ್ತಿನಿಂದ ಇದು ಬಳಕೆಯಲ್ಲಿದ್ದರೆ ದೇವಾಲಯಕ್ಕೆ ಆದಾಯವೂ ಬರುತ್ತಿತ್ತು ಮತ್ತು ಹೀಗೆ ಹಾಳಾಗುತ್ತಿರಲಿಲ್ಲ ಎಂದು ತಹಶೀಲ್ದಾರ್‌ ಹೇಳಿದರು.

ಯಾತ್ರಿಗಳಿಗೆ ಕೊಡದಿರುವುದಕ್ಕೆ ಕಾರಣವೇನು ಎಂದು ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಅವರನ್ನು ತಹಶೀಲ್ದಾರ್‌ ಪ್ರಶ್ನಿಸಿದಾಗ, ಅದಕ್ಕೆ ಅವರು ‘ಯಾತ್ರಿಗಳು ತಂಗಿದರೆ ವಿರಮಿಸಿಕೊಳ್ಳಲು ಪೀಠೋಪಕರಣಗಳು ಇಲ್ಲದ್ದರಿಂದ ನೀಡುತ್ತಿಲ್ಲ. ಇವುಗಳನ್ನು ಮಾಡಿಸಲು ಜಿಲ್ಲಾಧಿಕಾರಿಯವರಿಂದ ಅನುಮತಿ ಪಡೆಯಲಾಗಿದೆ. ಹಣವೂ ಮಂಜೂರಾಗಿದೆ. ಪಿಠೋಪಕರಣಗಳನ್ನು ಒದಗಿಸಲು ಅರಣ್ಯ ನಿಗಮಕ್ಕೆ ಕೇಳಿದ್ದು, ಕೆಲವೇ ದಿನಗಳಲ್ಲಿ ಪ್ರಾರಂಭಿಸಲಾಗುವುದು’ ಎಂಬ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT