ಭಾನುವಾರ, ಅಕ್ಟೋಬರ್ 20, 2019
27 °C

ಆಯುಧ ಪೂಜೆ | ಕೆಎಸ್‌ಆರ್‌ಟಿಸಿ ಬಸ್ ಪೂಜೆಗೆ ₹ 100

Published:
Updated:

ಬೆಂಗಳೂರು: ಆಯುಧ ಪೂಜೆ ಆಚರಣೆಗೆ ಅನುಮತಿ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
(ಕೆಎಸ್‌ಆರ್‌ಟಿಸಿ), ಬಸ್‌ಗಳ ಪೂಜೆಗಾಗಿ ತಲಾ ₹100 ನೀಡಲು ಆದೇಶಿಸಿದೆ.

ಈ ಹಿಂದೆ ₹40 ಇದ್ದು, ₹100ಕ್ಕೆ ಏರಿಕೆ ಮಾಡಲಾಗಿದೆ. ಇಲಾಖೆಯ ಜೀಪು, ಕಾರು ಹಾಗೂ ಇತರ ವಾಹನಗಳಿಗೆ ₹40 ನಿಗದಿ ಮಾಡಿದೆ.  ಕೇಂದ್ರೀಯ ಕಾರ್ಯಾಗಾರಕ್ಕೆ  ₹3,000 ಮತ್ತು ವಿಭಾಗೀಯ ಕಾರ್ಯಾಗಾರಗಳಿಗೆ ತಲಾ ₹1,000 ನೀಡಲು ಆದೇಶದಲ್ಲಿ ತಿಳಿಸಿದೆ.

 

Post Comments (+)