‘ಬೋಧನಾ ವೃತ್ತಿ ಪ್ರಸ್ತುತ ಸವಾಲಿನ ಕೆಲಸ: ಕರಜಗಿ

ಶುಕ್ರವಾರ, ಮೇ 24, 2019
28 °C
ಶಿಕ್ಷಣ ತಜ್ಞರ ಸಮ್ಮೇಳನದಲ್ಲಿ ಡಾ.ಗುರುರಾಜ ಕರಜಗಿ ಅಭಿಮತ

‘ಬೋಧನಾ ವೃತ್ತಿ ಪ್ರಸ್ತುತ ಸವಾಲಿನ ಕೆಲಸ: ಕರಜಗಿ

Published:
Updated:
Prajavani

ಬೆಂಗಳೂರು: ‘ಏಕಾಗ್ರತೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಂಡು ಪಾಠ ಮಾಡುವುದು ಸವಾಲಿನ ಕೆಲಸ’ ಎಂದು ಶಿಕ್ಷಣತಜ್ಞ ಡಾ.ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.

ದಯಾನಂದ ಸಾಗರ ವಿಶ್ವವಿದ್ಯಾಲಯವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಣ ತಜ್ಞರ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘1996ರಲ್ಲಿ ಮಕ್ಕಳು ಶಾಲಾ ಕೊಠಡಿಯಲ್ಲಿ 45 ನಿಮಿಷ ಏಕಾಗ್ರತೆಯಿಂದ ಕುಳಿತು ಪಾಠ ಕೇಳುತ್ತಿದ್ದರು. 2017ರಲ್ಲಿ ಅದು 6 ನಿಮಿಷಕ್ಕೆ ಕಡಿಮೆಯಾಗಿದೆ. ಈ ಹಿಂದೆ ಶಿಕ್ಷಕರು ಮಕ್ಕಳಿಗೆ ನಿಘಂಟು ತರುವಂತೆ ಹೇಳುತ್ತಿದ್ದರು. ಆದರೆ, ಈಗ ಕಲಿಕೆಯು ವೇಗ ಪಡೆದುಕೊಂಡಿದ್ದು, ಮಕ್ಕಳು  ಗೂಗಲ್‌ನಲ್ಲಿ ಶಬ್ದದ ಅರ್ಥವನ್ನು ಹುಡುಕುತ್ತಿದ್ದಾರೆ’ ಎಂದರು.

‘ಅಜ್ಜಿ ಜಗತ್ತಿನ ಮೊದಲ ಕ್ರಿಯಾಶೀಲ ಶಿಕ್ಷಕಿ. ಆಕೆ ಕಥೆ ಹೇಳುವ ಶೈಲಿಯಲ್ಲಿಯೇ ಪಾಠ ಮಾಡುವ ಮೂಲಕ ಮಕ್ಕಳನ್ನು ಹಿಡಿದಿಟ್ಟುಕೊಳ್ಳಬೇಕು. ಶಿಕ್ಷಕರು ಮಕ್ಕಳ ಕಲಿಕಾ ವಿಧಾನವನ್ನು ಗಮನಿಸಬೇಕು. ಅದರಂತೆ ಪಾಠ ಮಾಡಬೇಕು’ ಎಂದು ಹೇಳಿದರು.

ಬೇಸ್ ಸಂಸ್ಥಾಪಕ ನಿರ್ದೇಶಕ ಡಾ.ಎಚ್.ಎಸ್.ನಾಗರಾಜ, ‘40 ವರ್ಷಗಳಿಂದ ಈಚೆಗೆ ಶೈಕ್ಷಣಿಕ ವಾತಾವರಣ ಬದಲಾಗಿದೆ. ಕಡಿಮೆ ಗುಣಮಟ್ಟದ ಕಲಿಕಾ ಮಾದರಿಗಳು ಮಕ್ಕಳನ್ನು ಕಿಟಕಿಯಿಂದ ಆಚೆ ನೋಡುವಂತೆ ಮಾಡಿವೆ’ ಎಂದರು.

‘ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಯ ಕುರಿತು ವಿಶೇಷ ಕಾಳಜಿ ವಹಿಸಬೇಕು. ವಿದ್ಯಾರ್ಥಿಯ ಹಿಂದುಳಿಯುವಿಕೆಗೆ ಕಾರಣ ಏನು ಎಂಬ ಕುರಿತು ಯೋಚಿಸಬೇಕು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !