ಡಿಸಿಪಿ ನೇಮಗೌಡರ ‘ಒಲವಿನ ಉಡುಗೊರೆ’ ಹಾಡಿಗೆ ಮೆಚ್ಚುಗೆ

7

ಡಿಸಿಪಿ ನೇಮಗೌಡರ ‘ಒಲವಿನ ಉಡುಗೊರೆ’ ಹಾಡಿಗೆ ಮೆಚ್ಚುಗೆ

Published:
Updated:
Deccan Herald

ಹುಬ್ಬಳ್ಳಿ: ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಅವರು ರೆಡ್‌ ಎಫ್‌ಎಂ ರೇಡಿಯೊ (93.5) ಚಾನಲ್‌ನಲ್ಲಿ ಹಾಡಿದ ‘ಒಲವಿನ ಉಡುಗೊರೆ’ ಗೀತೆಗೆ ಸಂಗೀತ ಪ್ರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಸೆ. 29ರಂದು ನಡೆದ ನಮಸ್ಕಾರ ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ನೇಮಗೌಡ ಅವರು, ಸಂಚಾರ ನಿಯಮ ಪಾಲನೆಯ ಬಗ್ಗೆ ಮಾತನಾಡಿದ್ದರು. ಅದೇ ವೇಳೆ ಅವರು ‘ಒಲವಿನ ಉಡುಗೊರೆ’ ಚಿತ್ರದ ಶೀರ್ಷಿಕೆ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದರು.

ರೆಡ್‌ ಎಫ್‌ಎಂ ಆ ವಿಡಿಯೊವನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್‌ ಮಾಡಿದ್ದು, 13 ಸಾವಿರ ಜನ ವೀಕ್ಷಿಸಿದ್ದಾರೆ. 187 ಮಂದಿ ಹಂಚಿಕೊಂಡಿದ್ದಾರೆ ಹಾಗೂ 516 ಮಂದಿ ಮೆಚ್ಚಿಕೊಂಡಿದ್ದಾರೆ. ಒತ್ತಡ ನಿವಾರಣೆಗಾಗಿ ಹಾಡುತ್ತೇವೆ ಎಂದು ಅವರು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !