ಯುಜಿಸಿ ವೇತನಕ್ಕೆ ಆಗ್ರಹ

7

ಯುಜಿಸಿ ವೇತನಕ್ಕೆ ಆಗ್ರಹ

Published:
Updated:

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮದಂತೆ ವೇತನ ಮತ್ತು ಸೇವಾ ಭದ್ರತೆ ಒದಗಿಸಬೇಕು ಎಂದು ಅತಿಥಿ ಉಪನ್ಯಾಸಕರ ಸಂಘ ಒತ್ತಾಯಿಸಿದೆ.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್‌.ಡಿ.ಚಲವಾದಿ,‘ಅತಿಥಿಉಪನ್ಯಾಸಕರಿಗೆ ಸರ್ಕಾರ ತಿಂಗಳಿಗೆ ₹13,000 ಮತ್ತು ₹11,000 ಸಂಬಳ ನೀಡುತ್ತದೆ. ಇದನ್ನೂ ಸಕಾಲದಲ್ಲಿ ಕೊಡುತ್ತಿಲ್ಲ. ಯುಜಿಸಿ ಒಂದು ತರಗತಿಗೆ ₹ 1,500 ಕೊಡುವಂತೆ ಆದೇಶಿಸಿದೆ’ ಎಂದರು.

‘ಬೇಡಿಕೆ ಈಡೇರಿಕೆಗಾಗಿ ಇದೇ 18ರಿಂದ ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸುತ್ತೇವೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !