‘ಮೌನ ಬಯಸುವ ಸರ್ಕಾರ’

ಸೋಮವಾರ, ಮೇ 27, 2019
33 °C

‘ಮೌನ ಬಯಸುವ ಸರ್ಕಾರ’

Published:
Updated:
Prajavani

ಬೆಂಗಳೂರು: ‘ಪ್ರಸ್ತುತ ಸರ್ಕಾರ ರಾಷ್ಟ್ರಪ್ರೇಮದ ಹೆಸರಿನಲ್ಲಿ ಜನರ ಸಾಮಾಜಿಕ ಮತ್ತು ಆರ್ಥಿಕ ಆಯ್ಕೆಯ ಸ್ವಾತಂತ್ರ್ಯ
ವನ್ನು ಕಿತ್ತುಕೊಳ್ಳುತ್ತಿದೆ’ ಎಂದು ಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ನ (ಇಎಸ್‌ಜಿ) ಸಂಯೋಜನಾಧಿಕಾರಿ ಲಿಯೊ ಸಾಲ್ದಾನ ಅವರು ಅಭಿಪ್ರಾಯಪಟ್ಟರು.

ಸೆ೦ಟರ್ ಫಾರ್‌ ಸೋಷಿಯಲ್ ಆ್ಯಕ್ಷನ್‌ ಸಂಸ್ಥೆಯ ಸಹಯೋಗದಲ್ಲಿ ಸಂತ ಜೋಸಫರ ಕಾಲೇಜು ಗುರುವಾರ ಆಯೋಜಿಸಿದ್ದ ‘ಪ್ರಸ್ತುತ ಕಾಲಘಟ್ಟದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಸರ್ಕಾರ ಜನರ ಮೌನವನ್ನು ಬಯಸುತ್ತಿದೆ. ಮೌನ ಮುರಿದು ಮಾತನಾಡುವವರಿಗೆ ನಗರ ನಕ್ಸಲರು ಮತ್ತು ದೇಶದ್ರೋಹಿಗಳು ಎಂದು ಪಟ್ಟ ಕಟ್ಟುತ್ತಿದೆ. ದೇಶದಲ್ಲಿ ಅಸಹಿಷ್ಣುತೆ, ಅಸಹನೆಗಳು ಪರಮೋಚ್ಚ ಸ್ಥಿತಿ ತಲುಪಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಹೈನುಗಾರಿಕೆಗಾಗಿ ಗೋವನ್ನು ಸಾಗಿಸುವವರ ಮೇಲೂ ಸ್ವಯಂಘೋಷಿತ ಗೋರಕ್ಷಕರು ಹಲ್ಲೆ ನಡೆಸುತ್ತಾರೆ. ಇದರ ಹಿಂದೆ ರೈತರನ್ನು ಆರ್ಥಿಕವಾಗಿ ದುರ್ಬಲರನ್ನಾಗಿಸುವ ಹುನ್ನಾರವಿದೆ’ ಎಂದು ಹೇಳಿದರು.

ಪರ್ಯಾಯ ಕಾನೂನು ವೇದಿಕೆಯ (ಎಎಲ್ಎಫ್) ಅರವಿಂದ್‌ ನರೈನ್‌,‘ಮೌಲ್ಯಯುತ ಚಿಂತನೆಗಳ ಕುರಿತಾದ ಸಂವಾದಕ್ಕೆ ಸರ್ಕಾರ ಅಡ್ಡಿಪಡಿಸುತ್ತಿದೆ. ಪ್ರಶ್ನಿಸುವ ವಿದ್ಯಾರ್ಥಿಗಳ ಮೇಲೆ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳುತ್ತಿದೆ’ ಎಂದು ಆರೋಪಿಸಿದರು.

‘ಶಬರಿಮಲೆ, ಲೈಂಗಿಕ ಅಲ್ಪಸಂಖ್ಯಾತರ ಕುರಿತಾದ ತೀರ್ಪುಗಳು ಹೊಸ ಆಶಾವಾದವನ್ನು ಹುಟ್ಟುಹಾಕಿವೆ. ಶಬರಿಮಲೆ ವಿಷಯವನ್ನು ಕೆಲವರು ಪೂರ್ವಗ್ರಹದಿಂದ ಸ್ವೀಕರಿಸಿದ ಕಾರಣ ತೀರ್ಪನ್ನು ವಿರೋಧಿಸಿದರು’ ಎಂದರು.

ವಿದ್ಯಾರ್ಥಿ ಲವಕುಮಾರ್‌, ‘ಬಲವಂತವಾಗಿ ಜನರನ್ನು ಮೌನವಾಗಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯುವಕರು ಹೆಚ್ಚು ಮಾತನಾಡುವ ಅಗತ್ಯವಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !