ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚದಲ್ಲಿ ಬೆರಗು ಮೂಡಿಸಿದ ಮಕ್ಕಳು

ಡೆಕ್ಕನ್‌ ಹೆರಾಲ್ಡ್‌ನಿಂದ ಅಂತರ್‌ಶಾಲಾ ಚಿತ್ರಕಲಾ ಸ್ಪರ್ಧೆ ಆಯೋಜನೆ
Last Updated 1 ಆಗಸ್ಟ್ 2019, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಕೆಎಂಎಫ್‌ ಹಾಗೂ ಎಂಎಸ್‌ಐಎಲ್‌ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಅಂತರ ಶಾಲಾ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಬ್ಬನ್‌ ಪಾರ್ಕ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಜಾಗತಿಕ ತಾಪಮಾನ, ಮಾಲಿನ್ಯ, ಸಂಚಾರ ದಟ್ಟಣೆ ಸಮಸ್ಯೆ, ಮಹಿಳಾ ಹಕ್ಕುಗಳು ಮತ್ತಿತರ ಮಹತ್ವದ ವಿಷಯ ಆಧಾರಿತ ಚಿತ್ರಗಳನ್ನು ಬರೆದು ಗಮನ ಸೆಳೆದರು. ಹಿರಿಯ ವಿಭಾಗದವರಿಗೆ ‘ನಮ್ಮ ನಗರ ಬೆಂಗಳೂರು’ ವಿಷಯವನ್ನು ನೀಡಲಾಗಿತ್ತು. ಸುರೇಶ್‌ ಜಯರಾಂ ಹಾಗೂ ನಾಗಲಿಂಗಪ್ಪ ಆರ್. ಬಡಿಗೇರ ತೀರ್ಪುಗಾರರಾಗಿದ್ದರು. ಕಿರಿಯರ ವಿಭಾಗದಲ್ಲಿ ಡಿ.ಎಸ್. ಧವನ (5ನೇ ತರಗತಿ) ಪ್ರಥಮ ಬಹುಮಾನ, ಹಿರಿಯರ ವಿಭಾಗದಲ್ಲಿ ಹತ್ತನೇ ತರಗತಿಯ ವಿಕಾಸ್ ಮೊದಲ ಬಹುಮಾನ ಪಡೆದರು.

ಅಂತಿಮ ಫಲಿತಾಂಶ ಇಂತಿದೆ
ಕಿರಿಯರ ವಿಭಾಗ
1. ಡಿ.ಎಸ್. ಧವನ, ಪೂರ್ಣಪ್ರಜ್ಞ ಶಾಲೆ, ನಾಗಸಂದ್ರ
2. ಸಿಂಧು ಎಸ್. ಮೇಟಿ, ಜುಬಿಲಿ ಶಾಲೆ, ವಿಜಿನಾಪುರ
3. ಮಾನ್ಯ ಕುನಾಲ್‌, ಕೇಂಬ್ರಿಜ್‌ ಪಬ್ಲಿಕ್‌ ಶಾಲೆ, ಎಚ್.ಎಸ್.ಆರ್. ಲೇಔಟ್‌,
ಸಮಾಧಾನಕರ ಬಹುಮಾನ: ವಿನೂತನ್‌ ರೆಡ್ಡಿ, ದಿ ವೃಕ್ಷ ಶಾಲೆ, ರಾಯಸಂದ್ರ, ನಿಯತಿ ಎಂ. ಟೊಪಗಿ, ಕೆ.ಎಂ.ವಿ. ರೆಡ್‌ ಹಿಲ್ಸ್‌ ಪ್ರೌಢಶಾಲೆ, ಹೆಸರಘಟ್ಟ. ಮೆಚ್ಚುಗೆ– ತರುಣ್‌ ಜೆ.ಟಿ. ಸಿದ್ಧಗಂಗಾ ಪಬ್ಲಿಕ್‌ ಶಾಲೆ.

ಹಿರಿಯರ ವಿಭಾಗ
1. ಆರ್. ವಿಕಾಸ್‌, ವಿಇಟಿ ಶಾಲೆ, ಜೆ.ಪಿ. ನಗರ
2. ಪ್ರತೀಕ್‌ ಶಾನಭಾಗ, ಮಹಿಳಾ ಸೇವಾ ಸಮಾಜ, ಹಿರಿಯ ಪ್ರಾಥಮಿಕ ಶಾಲೆ
3. ಜ್ಯೇಷ್ಠ ಸುಧೀರ್‌, ನ್ಯಾಷನಲ್‌ ಪಬ್ಲಿಕ್‌ ಶಾಲೆ, ಯಶವಂತಪುರ
ಸಮಾಧಾನಕರ ಬಹುಮಾನ: ಎಸ್. ನಿತಿನ್‌, ಸ್ವರ್ಗರಾಣಿ ಶಾಲೆ, ಆರ್.ಆರ್. ನಗರ, ಚೈತನ್ಯಾ ಡಿ. ಕಂಬನೂರ್, ಬಂಟರ ಸಂಘ ಆರ್.ಎನ್. ವಿದ್ಯಾನಿಕೇತನ್, ವಿಜಯ ನಗರ. ಮೆಚ್ಚುಗೆ: ಬಿ. ಅಕ್ಷಿತಾ, ಆರ್ಮಿ ಪಬ್ಲಿಕ್‌ ಶಾಲೆ, ಕಾಮರಾಜ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT