16ರಿಂದ ದೃಶ್ಯ ನಾಟಕೋತ್ಸವ

7

16ರಿಂದ ದೃಶ್ಯ ನಾಟಕೋತ್ಸವ

Published:
Updated:

ಬೆಂಗಳೂರು: ದೃಶ್ಯ ರಂಗತಂಡ ಇದೇ 16ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಮೂರು ದಿನಗಳ ನಾಟಕೋತ್ಸವವನ್ನು ಆಯೋಜಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ದೃಶ್ಯ ರಂಗತಂಡದ ಸಂಸ್ಥಾಪಕ ನಿರ್ದೇಶಕಿ ದಾಕ್ಷಾಯಿಣಿ ಭಟ್‌,‘ಪ್ರತಿ ವರ್ಷದಂತೆ ಈ ವರ್ಷವೂ ನಾಟಕೋತ್ಸವದಲ್ಲಿ ನಾಲ್ವರು ಸಾಧಕರಿಗೆ ರಂಗ ಗೌರವ ಸಲ್ಲಿಸಲಾಗುತ್ತದೆ.

ದೃಶ್ಯ ರಂಗತಂಡದ ಕಲಾವಿದರು, ಜಯಪ್ರಕಾಶ ಮಾವಿನಕುಳಿ ರಚಿಸಿದ ‘ಅಭಿಯಾನ’ ಮತ್ತು ಭೀಷ್ಮ ಸಹಾನಿ ರಚನೆಯ ಹಾನೂಶ್‌ ನಾಟಕಗಳನ್ನು ಪ್ರಸ್ತುತಪಡಿಸಲಿದ್ದಾರೆ. ಬಿಂದು ಮಾಲಿನಿ ಹಾಗೂ ಎಂ.ಡಿ.ಪಲ್ಲವಿ ಅವರು ‘ಸ್ತ್ರೀ ಕಥನ ಗಾನ ಯಾನ’ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ’ ಎಂದು ತಿಳಿಸಿದರು.

‘ಪ್ರತಿ ನಾಟಕಕ್ಕೂ ₹100 ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !