ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಯಲ್ಲೂ ತಾರತಮ್ಯ!

‘ಐಸೆಕ್‌’ ಸಮೀಕ್ಷೆಯಿಂದ ಬಹಿರಂಗ
Last Updated 28 ನವೆಂಬರ್ 2018, 20:31 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲರೂ ಸಮಾನರು; ಕೆಲವರು ಹೆಚ್ಚು ಸಮಾನರು’ ಎಂಬ ಮಾತೊಂದಿದೆ. ಇದು ಬೆಂಗಳೂರಿಗರ ದೃಷ್ಟಿಯಲ್ಲಿ ಅಕ್ಷರಶಃ ಸತ್ಯ. ನಗರದ ಪ್ರತಿಷ್ಠಿತ ಬಡಾವಣೆಗಳಿಗೆ ಉಳಿದ ಪ್ರದೇಶಗಳಿಗಿಂತಲೂ ಎಂಟು ಪಟ್ಟು ಹೆಚ್ಚು ನೀರು ಪೂರೈಸಲಾಗುತ್ತಿದೆ.

ಸಾಮಾಜಿಕ– ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (ಐಎಸ್‌ಇಸಿ) ನಡೆಸಿರುವ ಸಮೀಕ್ಷೆಯೊಂದರಿಂದ ಈ ಸಂಗತಿ ಬೆಳಕಿಗೆ ಬಂದಿದೆ. ಯಲಹಂಕ, ಕೋರಮಂಗಲ, ಗಾಂಧಿನಗರ, ಶಾಂತಲಾನಗರದ ನಿವಾಸಿಗಳು, ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆ ನಿಗದಿಪಡಿಸಿರುವ ತಲಾ 135 ಲೀಟರ್‌ಗಿಂತ ಅಧಿಕ ನೀರು ಬಳಕೆ ಮಾಡುತ್ತಿದ್ದಾರೆ. ಆದರೆ, ಗೊಟ್ಟಿಗೆರೆ, ಥಣಿಸಂದ್ರ ಹಾಗೂ ಕಾಡುಗೋಡಿ ಜನರಿಗೆ 0.39 ಲೀಟರ್‌ಗಿಂತ ಕಡಿಮೆ ನೀರು ಸಿಗುತ್ತಿದೆ.

‘ನಗರದ ಹಳೇ ಬಡಾವಣೆಗಳ ಜನರು ಮಾತ್ರ ಹೆಚ್ಚಿನ ನೀರು ಬಳಸುತ್ತಿಲ್ಲ. ಪ್ರತಿಷ್ಠಿತ ಬಡಾವಣೆಗಳೂ ಅಧಿಕ ಪ್ರಮಾಣದ ನೀರು ಬಳಕೆ ಮಾಡುತ್ತಿರುವ ‍ಪ್ರದೇಶಗಳಲ್ಲಿ ಸೇರಿವೆ. ಹಳೇ ಬಡಾವಣೆಗಳಿಗೆ ನೀರು ಸುಲಭವಾಗಿ ಪೂರೈಕೆಯಾಗುತ್ತಿದೆ. ಅಲ್ಲದೆ, ಸಂಗ್ರಹ ಸಾಮರ್ಥ್ಯವೂ ಹೆಚ್ಚಿದೆ’ ಎಂದು ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕುರಿತು ಸಮೀಕ್ಷೆ ನಡೆಸಿದ ತಂಡದಲ್ಲಿದ್ದ ಪ್ರೊ. ಕೃಷ್ಣರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ದೊಡ್ಡಬಿದರೆಕಲ್ಲು, ಗೊಟ್ಟಿಗೆರೆ, ಕುವೆಂಪುನಗರ, ಹೆರೋಹಳ್ಳಿ, ಸಿಂಗಸಂದ್ರ, ಹೊರಮಾವು, ದೊಡ್ಡಬೊಮ್ಮಸಂದ್ರ, ಜಕ್ಕೂರು ಪ್ರದೇಶಗಳ ಜನರಿಗೆ ಪ್ರತಿದಿನ ತಲಾ 10 ಲೀಟರ್‌ಗಿಂತ ಕಡಿಮೆ ನೀರು ಮಾತ್ರವೇ ಸಿಗುತ್ತಿದೆ. ಕೆಲವು ಪ್ರದೇಶಗಳಿಗೆ ನೀರು ಪೂರೈಕೆಯೇ ಇಲ್ಲ. ಅನೇಕ ಕಡೆ ಕೊಳವೆ ಬಾವಿಗಳನ್ನು ಅವಲಂಬಿಸಲಾಗಿದೆ. ನೀರಿನ ಬಳಕೆಗೆ ಸಂಬಂಧಿಸಿದಂತೆ ಬೆಂಗಳೂರಿನ ಜೊತೆ ಜಗತ್ತಿನ ಬೇರೆ ಬೇರೆ ನಗರಗಳನ್ನು ಹೋಲಿಸಿ ಅಧ್ಯಯನ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT