ವಿದ್ಯುತ್‌ ದರ ಹೆಚ್ಚಿಸಬೇಡಿ: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ

7

ವಿದ್ಯುತ್‌ ದರ ಹೆಚ್ಚಿಸಬೇಡಿ: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ

Published:
Updated:

ಬೆಂಗಳೂರು: ಬೆಸ್ಕಾಂ ಸಲ್ಲಿಸಿರುವ ಕೋರಿಕೆ ಮೇರೆಗೆ ಮುಂದಿನ ಹಣಕಾಸು ವರ್ಷದಿಂದ ಪ್ರತಿ ಯೂನಿಟ್‌ ವಿದ್ಯುತ್‌ಗೆ ₹1.01 ದರ ಹೆಚ್ಚಳ ಮಾಡಬಾರದು ಎಂದು ಬಿ–ಪ್ಯಾಕ್‌ ಸಮೂಹ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿದೆ.

ಆಯೋಗ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಬಿ.ಪ್ಯಾಕ್ ಸಮೂಹದ ಉಪಾಧ್ಯಕ್ಷ ಟಿ.ವಿ.ಮೋಹನ್‍ದಾಸ್ ಪೈ,‘ವಿದ್ಯುತ್‌ ಪೂರೈಕೆ
ಯಲ್ಲಿ ಹೆಚ್ಚಿನ ಸೋರಿಕೆ ಪ್ರಮಾಣ ತೋರಿಸಿ, ‘ಆರ್ಥಿಕ ಹೊರೆಯಾಗುತ್ತಿದೆ’ ಎಂದು ಬೆಸ್ಕಾಂ ವಾದಿಸುತ್ತಿದೆ. ಹೆಚ್ಚಿನ ದರಕ್ಕೆ ವಿದ್ಯುತ್‌ ಖರೀದಿಸುತ್ತಿದೆ. ಇವುಗಳಿಗೆ ಕಡಿವಾಣ ಹಾಕಬೇಕು’ ಎಂದರು.

‘ಬೆಸ್ಕಾಂನ ಈಗಿನ ಆರ್ಥಿಕ ಸ್ಥಿತಿ ಸುಸ್ಥಿರವಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ದರ ಹೆಚ್ಚಳ ಮಾಡದೇ ಆಯೋಗ ಜನರ ಹಿತಾಸಕ್ತಿ ಕಾಪಾಡಬೇಕು’ ಎಂದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !