ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಕಟ್ಟಲು‌ ಪ್ರತಿಭಾವಂತರು ಬೇಕು

ಉನ್ನತ ಹುದ್ದೆಗೆ ಖಾಸಗಿ ವ್ಯಕ್ತಿಗಳ ನೇಮಕ ಅಧಿಸೂಚನೆಯ ವಿವರ
Last Updated 10 ಜೂನ್ 2018, 19:25 IST
ಅಕ್ಷರ ಗಾತ್ರ

ನವದೆಹಲಿ: ‘ದೇಶವನ್ನು ಕಟ್ಟುವ ಸಲುವಾಗಿ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಸೇರಲು ಪ್ರತಿಭಾವಂತ ಮತ್ತು ಉತ್ಸಾಹಿ ಭಾರತೀಯರಿಗೆ, ಭಾರತ ಸರ್ಕಾರವು ಆಹ್ವಾನ ನೀಡುತ್ತಿದೆ’ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಧಿಸೂಚನೆಯು ಹೇಳುತ್ತದೆ.

‘ಭಾರತ ಸರ್ಕಾರದಲ್ಲಿ ಹಿರಿಯ ವ್ಯವಸ್ಥಾಪಕರ ಸ್ಥಾನ ಹೊಂದಿರುವ ಜಂಟಿ ಕಾರ್ಯದರ್ಶಿ ಹುದ್ದೆಗಳು ಅತ್ಯಂತ ಮಹತ್ವದ್ದಾಗಿವೆ. ನೀತಿ ರೂಪಣೆಯಲ್ಲಿ ಮತ್ತು ಮಹತ್ವದ ಯೋಜನೆ ಹಾಗೂ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಈ ಹುದ್ದೆಗಳು ಮಹತ್ವದ ಪಾತ್ರ ವಹಿಸುತ್ತವೆ. ಯಾವುದೇ ಸಚಿವಾಲಯ/ಇಲಾಖೆಯ ಕಾರ್ಯದರ್ಶಿ ಅಥವಾ ಹೆಚ್ಚುವರಿ ಕಾರ್ಯದರ್ಶಿಗಳ ಅಧೀನದಲ್ಲಿ ಜಂಟಿ ಕಾರ್ಯದರ್ಶಿಗಳು ಕೆಲಸ ಮಾಡಬೇಕಾಗುತ್ತದೆ’ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಸರ್ಕಾರದ ಯಾವುದೇ ಹುದ್ದೆಯಲ್ಲಿರುವ ನೌಕರರಿಗೆ ದೊರೆಯುವ ಸಂಬಳವೇ ಇವರಿಗೂ ದೊರೆಯಲಿದೆ. ಅಲ್ಲದೆ, ಸರ್ಕಾರಿ ನೌಕರರಿಗೆ ದೊರೆಯುವ ಎಲ್ಲ ಭತ್ಯೆ ಮತ್ತು ಸವಲತ್ತುಗಳಿಗೂ ಇವರು ಅರ್ಹರಾಗಿರುತ್ತಾರೆ.

**

ಅರ್ಜಿ ಸಲ್ಲಿಸಲು ಅರ್ಹತೆಗಳು

* 40 ವರ್ಷ ಮೀರಿರಬಾರದು (ಜುಲೈ 1, 2018ಕ್ಕೆ)

* ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು

* ಖಾಸಗಿ ಕಂಪನಿಗಳಲ್ಲಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ, ಅಂತರರಾಷ್ಟ್ರೀಯ ಸಂಘಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ದುಡಿಯುತ್ತಿರುವವರು ಅರ್ಜಿ ಸಲ್ಲಿಸಬಹುದು. 15 ವರ್ಷ ಅನುಭವ ಇರಲೇಬೇಕು

* ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ, ಸ್ವಾಯತ್ತ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು. 15 ವರ್ಷ ಅನುಭವ ಇರಬೇಕು

* ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಲ್ಲಿ ಜಂಟಿ ಕಾರ್ಯದರ್ಶಿ ಹುದ್ದೆ ಅಥವಾ ಆ ಹುದ್ದೆಗೆ ಸಮನಾದ ಹುದ್ದೆಗಳಲ್ಲಿರುವ ಅಧಿಕಾರಿಗಳು ಅರ್ಜಿ ಸಲ್ಲಿಸಬಹುದು

**

ಎಲ್ಲಿ ಕೆಲಸ

* ಕಂದಾಯ ಸಚಿವಾಲಯ

* ಆರ್ಥಿಕ ಸೇವಾ ಇಲಾಖೆ

*  ಹಣಕಾಸು ಸಚಿವಾಲಯ

* ಕೃಷಿ ಸಚಿವಾಲಯ

* ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

* ಹಡಗುಯಾನ ಸಚಿವಾಲಯ

* ಪರಿಸರ ಸಚಿವಾಲಯ

* ನವೀಕರಿಸಬಹುದಾದ ಇಂಧನ ಸಚಿವಾಲಯ

* ನಾಗರಿಕ ವಿಮಾನಯಾನ ಸಚಿವಾಲಯ

* ವಾಣಿಜ್ಯ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT