ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ ಪೆಡ್ಲರ್‌ಗಳಾದ ಕೇರಳದ ವಿದ್ಯಾರ್ಥಿಗಳು

Last Updated 15 ಮೇ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು: ಒಬ್ಬ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದರೆ, ಮತ್ತೊಬ್ಬ ಪೆಟ್ರೋಲಿಯಂ ಎಂಜಿನಿಯರಿಂಗ್ ವಿದ್ಯಾರ್ಥಿ. ಇನ್ನೊಬ್ಬ ಈಗಷ್ಟೇ ಡಿಪ್ಲೊಮಾ (ಸಿವಿಲ್) ಪೂರ್ಣಗೊಳಿಸಿದ್ದಾನೆ. ಡ್ರಗ್ಸ್ ದಂಧೆ ಮೂಲಕ ಪರಸ್ಪರ ಸ್ನೇಹಿತರಾದ ಕೇರಳದ ಈ ಮೂವರು, ಈಗ ಬೆಂಗಳೂರಿನಲ್ಲೂ ಗಾಂಜಾ ಮಾರಲು ಬಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ!

ಶ್ಯಾಮ್‌ದಾಸ್ (25), ಆರಿಷ್ ಕುಮಾರ್ (24) ಹಾಗೂ ಜಿಬಿನ್ ಜಾನ್ (21) ಎಂಬುವರನ್ನು ಬಂಧಿಸಿರುವ ಸುದ್ದಗುಂಟೆಪಾಳ್ಯ ‍ಪೊಲೀಸರು, ₹ 4.66 ಲಕ್ಷ ಮೌಲ್ಯದ 23 ಕೆ.ಜಿ ಗಾಂಜಾ ಹಾಗೂ ತೂಕದ ಯಂತ್ರಗಳನ್ನು ಜಪ್ತಿ ಮಾಡಿದ್ದಾರೆ. ಇವರ ಸಹಚರರಾದ ಆವಲಹಳ್ಳಿಯ ಗೋಕುಲ್ ಹಾಗೂ ಅರೋಮನ್ ತಲೆಮರೆಸಿಕೊಂಡಿದ್ದಾರೆ.

ಮಾದಕ ವ್ಯಸನಿಗಳೂ ಆಗಿರುವ ಇವರು, ಡ್ರಗ್ಸ್ ಖರೀದಿಗೆ ಹಾಗೂ ಪಾರ್ಟಿಗಳಿಗೆ ಹೋಗಲು ಹಣಕ್ಕಾಗಿ ಪೆಡ್ಲರ್‌ (ಡ್ರಗ್ಸ್ ಪೂರೈಕೆದಾರರು) ಆಗಿಯೂ ಕೆಲಸ ಮಾಡುತ್ತಿದ್ದರು. ಕೇರಳ ಹಾಗೂ ವಿಶಾಖಪಟ್ಟಣದ ವ್ಯಕ್ತಿಗಳಿಂದ ಗಾಂಜಾ ತಂದು, ಅದನ್ನು ಆವಲಹಳ್ಳಿಯ ಗೋಕುಲ್‌ನ ಮನೆಯಲ್ಲಿ ಇಡುತ್ತಿದ್ದರು. ನಂತರ ಸಣ್ಣ ಸಣ್ಣ ಪೊಟ್ಟಣ ಮಾಡಿ ನಗರದ ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು.

‘ಮಂಗಳವಾರ ರಾತ್ರಿ ಈ ಮೂವರು ಗಾಂಜಾ ತೆಗೆದುಕೊಂಡು ಸುದ್ದಗುಂಟೆಪಾಳ್ಯಕ್ಕೆ ಬಂದಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಇನ್‌ಸ್ಪೆಕ್ಟರ್ ಮಹಮದ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದೆ. ಇವರಿಗೆ ಗಾಂಜಾ ಕೊಡುತ್ತಿದ್ದವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT