ಹುಬ್ಬಳ್ಳಿಯಲ್ಲಿ ನಿತ್ಯ ದುರ್ಗಾಮಾತಾ ದೌಡ

7
ದಸರಾ: ಹಿಂದೂ ಜಾಗರಣ ವೇದಿಕೆಯಿಂದ ಕಾರ್ಯಕ್ರಮ

ಹುಬ್ಬಳ್ಳಿಯಲ್ಲಿ ನಿತ್ಯ ದುರ್ಗಾಮಾತಾ ದೌಡ

Published:
Updated:

ಹುಬ್ಬಳ್ಳಿ: ನವರಾತ್ರಿ ಅಂಗವಾಗಿ ಹಿಂದೂ ಜಾಗರಣ ವೇದಿಕೆ ಹುಬ್ಬಳ್ಳಿ–ಧಾರವಾಡ ಮಹಾನಗರ ಘಟಕದ ವತಿಯಿಂದ ಬುಧವಾರ ದುರ್ಗಾಮಾತಾ ದೌಡ ಆರಂಭವಾಗಿದ್ದು, ಅ. 16ರ ತನಕ ಜರುಗಲಿದೆ. 

ವೇದಿಕೆಯ ಉತ್ತರ ಕರ್ನಾಟಕ ಪ್ರಾಂತ್ಯ ಅಧ್ಯಕ್ಷ ರಾಮಚಂದ್ರ ಜಿ. ಮಟ್ಟಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಪ್ರತಿ ವರ್ಷದಂತೆ ಈ ವರ್ಷವೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ. 17ರಂದು ಏಕಕಾಲಕ್ಕೆ ಎರಡೂ ಕಡೆಯಿಂದ 2111 ಸುಮಂಗಲಿಯರಿಂದ ಕುಂಭಮೇಳ ಮೆರವಣಿಗೆ ನಡೆಯುತ್ತದೆ. ಎರಡೂ ಮೆರವಣಿಗೆ ಚನ್ನಮ್ಮ ವೃತ್ತದಲ್ಲಿ ಸೇರಿ ಮೂರು ಸಾವಿರ ಮಠದ ಆವರಣದ ತನಕ ತೆರಳಲಿದೆ. ಅಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ’ ಎಂದರು

‘17ರಂದು ಒಂದು ಮೆರವಣಿಗೆ ಹಳೇ ಹುಬ್ಬಳ್ಳಿಯ ನಾರಾಯಣ ಪೇಟದ ಎಸ್‌ಎಸ್‌ಕೆ ಕಲ್ಯಾಣ ಮಂಟಪದ ತುಳಜಾಭವಾನಿ ದೇವಸ್ಥಾನದ ಆವರಣದಿಂದ, ಇನ್ನೊಂದು ಮೆರವಣಿಗೆ ತುಮಕೂರು ಓಣಿಯಲ್ಲಿರುವ ಸಿದ್ದವೀರಪ್ಪನ ಪೇಟದ ದುರ್ಗಾದೇವಿ ದೇವಸ್ಥಾನದಿಂದ ಹೊರಡಲಿದೆ’ ಎಂದು ತಿಳಿಸಿದರು.

ವೇದಿಕೆಯ ಪ್ರಮುಖರಾದ ಸೀಮಾ ಲದವಾ, ಕೃಷ್ಣಾ ಗಂಡಗಾಳೆಕರ, ಸಂತೋಷ ಕಠಾರೆ, ವಿಶ್ವನಾಥ ಬೂದೂರು, ಪವನ ಕಾಟವೆ, ಸೀಮಾ ಇದ್ದರು.

ದುರ್ಗಾಮಾತಾ ದೌಡ ಹೊರಡುವ ಸ್ಥಳಗಳು (ಆರಂಭ: ಬೆ. 7.30ರಿಂದ 8.30)

ಅ. 11: ನೇಕಾರ ನಗರದ ಬಸವೇಶ್ವರ ವೃತ್ತದ ಹನುಮಂತ ದೇವಸ್ಥಾನದಿಂದ ಗಣೇಶ ಕಾಲೊನಿ, ರಾಘವೇಂದ್ರ ಕಾಲೊನಿ, ರಣದಮ್ಮ ದೇವಸ್ಥಾನದಲ್ಲಿ ಆವರಣದ ತನಕ.

ಆ. 12: ರವಿನಗರದ ಗಣೇಶ ದೇವಸ್ಥಾನದಿಂದ ಹನುಮಂತ ದೇವಸ್ಥಾನ, ಪ್ರಸನ್ನ ಕಾಲೊನಿ, ಈಶ್ವರ ದೇವಸ್ಥಾನ, ಬಸವೇಶ್ವರ ನಗರ, ದುರ್ಗಾದೇವಸ್ಥಾನ, ರಾಮಲಿಂಗೇಶ್ವರ ನಗರ ಮೂಲಕ ಬಂದು ಬಸವಣ್ಣ ದೇವಸ್ಥಾನದ ತನಕ.

ಆ. 13: ಆನಂದ ನಗರದ ಪೂರ್ವಾಂಜನೇಯ ದೇವಸ್ಥಾನದಿಂದ ಆರಂಭಗೊಂಡು ಬನ್ನಿ ಮಹಾಂಕಾಳಿ ದೇವಸ್ಥಾನ, ಗಣೇಶ ದೇವಸ್ಥಾನ, ಸಿದ್ರಾಮೇಶ್ವರ ನಗರ, ದಾನಮ್ಮ ದೇವಸ್ಥಾನ, ಮಯೂರ ನಗರ, ದುರ್ಗಾ ಶಕ್ತಿ ದೇವಸ್ಥಾನ, ವೀರಭದ್ರ ದೇವಸ್ಥಾನ, ತುಳಜಾ ಭವಾನಿ ದೇವಸ್ಥಾನದ ಬಳಿ ಮುಗಿಯಲಿದೆ.

ಅ. 14: ಕೇಶ್ವಾಪುರದ ಹನುಮಂತ ದೇವಸ್ಥಾನದಿಂದ ಆರಂಭವಾಗಿ ವಾಲ್ಮೀಕಿ ವೃತ್ತ, ರಮೇಶ ಭವನ, ನಾಗಶೆಟ್ಟಿಕೊಪ್ಪ, ಬನ್ನಿ ಮಹಾಂಕಾಳಿ ದೇವಸ್ಥಾ, ಮಧುರಾ ಕಾಲೊನಿ ತನಕ.

ಅ. 15: ಮಂಟೂರ ರಸ್ತೆಯಲ್ಲಿ ಮುಲಾಲಿ ಜೋಪಡಿ ಕರಿಯಮ್ಮ ದೇವಸ್ಥಾನದಿಂದ ಪ್ರಾರಂಭಗೊಂಡು ಅರಳಿಕಟ್ಟಿ ಕರಿಯಮ್ಮ ದೇವಸ್ಥಾನ, ಹರಿಶ್ಚಂದ್ರ ಕಾಲೊನಿ, ಮಾರಮ್ಮ ದೇವಸ್ಥಾನ, ಅಂಬೇಡ್ಕರ್‌ ಕಾಲೊನಿ, ಆಂಜನೇಯ ದೇವಸ್ಥಾನ, ಕೃಪಾ ನಗರ, ಮಾರುತಿ ದೇವಸ್ಥಾನ, ಬ್ಯಾಳಿ ಪ್ಲಾಟ್‌, ಬಸವೇಶ್ವರ ದೇವಸ್ಥಾನ, ಮ್ಯಾಗ್ನಿಸ್‌ ಪ್ಲಾಟ್‌ ಮೂಲಕ ವಲ್ಲೂಭಾಯಿ ನಗರದ ಮುತ್ತು ಮಾರೆಮ್ಮನ ದೇವಸ್ಥಾನದ ತನಕ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !