ಒಂದೇ ಗಂಟೆಯಲ್ಲಿ ಮುಕ್ತಾಯ

ಬುಧವಾರ, ಜೂನ್ 26, 2019
27 °C
ಕಾಮೆಡ್‌ – ಕೆ ಸೀಟು ಆಯ್ಕೆ, ಪೋಷಕರ ಕೋರಿಕೆ

ಒಂದೇ ಗಂಟೆಯಲ್ಲಿ ಮುಕ್ತಾಯ

Published:
Updated:
Prajavani

ಬೆಂಗಳೂರು: ಕಾಮೆಡ್‌–ಕೆ ಮೂಲಕ ಎಂಜಿನಿಯರಿಂಗ್‌ ಸೀಟು ಆಯ್ಕೆ ಪ್ರಕ್ರಿಯೆ ಕೇವಲ ಒಂದು ಗಂಟೆಯಲ್ಲಿ ಮುಗಿಯುತ್ತದೆ. ಪೋಷಕರ ಕೋರಿಕೆಯ ಮೇರೆಗೆ ಆನ್‌ಲೈನ್‌ ಬದಲಿಗೆ ಆಫ್‌ಲೈನ್‌ನಲ್ಲಿ ಕೌನ್ಸೆಲಿಂಗ್‌ ನಡೆಯುತ್ತದೆ ಎಂದು ವಿಶೇಷಾಧಿಕಾರಿ ಡಾ.ಶಾಂತಾರಾಂ ನಾಯಕ್‌ ಹೇಳಿದರು.

ಶೈಕ್ಷಣಿಕ ಮೇಳದಲ್ಲಿ ಅವರು ಮಾಹಿತಿ ನೀಡಿದರು.

‘ಅಭ್ಯರ್ಥಿಯ ಬಯೊಮೆಟ್ರಿಕ್‌ ಪರಿಶೀಲನೆ ಇರುವುದರಿಂದ ಕೌನ್ಸೆಲಿಂಗ್‌ಗೆ ಅಭ್ಯರ್ಥಿಯ ಹಾಜರಾತಿ ಕಡ್ಡಾಯ. ಕೈಪಿಡಿಯಲ್ಲಿ ತಿಳಿಸಿದಂತೆ ಎಲ್ಲ ಮೂಲ ದಾಖಲೆಗಳನ್ನೂ ತಂದಿದ್ದೇ ಆದರೆ ಒಂದೇ ಗಂಟೆಯಲ್ಲಿ ಪ್ರಕ್ರಿಯೆಗಳೆಲ್ಲವೂ ಕೊನೆಗೊಳ್ಳುತ್ತವೆ. ತಡವಾಗಿ ಬಂದವರಿಗೆ ಅದೇ ದಿನದ ಕೊನೆಯಲ್ಲಿ ಕೌನ್ಸೆಲಿಂಗ್‌ ನಡೆಯುತ್ತದೆ. ಅಭ್ಯರ್ಥಿಯ ಭಾವಚಿತ್ರಸಹಿತ ಇರುವ ಕಾಲೇಜು ಪ್ರವೇಶ ಆದೇಶಪತ್ರವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು. ಕಳೆದಕೊಂಡರೆ, ಇನ್ನೊಂದು ಪ್ರತಿ ಕೊಡುವುದೇ ಇಲ್ಲ. ಅಂತಹವರ ಸೀಟು ಕಳೆದುಹೋಯಿತು ಎಂದೇ ಅರ್ಥ’ ಎಂದು ಶಾಂತಾರಾಂ ವಿವರಿಸಿದರು.

‘ಕೇವಲ ಎರಡು ಸುತ್ತಿನ ಆಯ್ಕೆ ಪ್ರಕ್ರಿಯೆ ಇರುತ್ತದೆ. ಜಯನಗರದ ನಂದಾ ಟಾಕೀಸ್‌ ಬಳಿಯ ಎನ್‌ಎಂಕೆಆರ್‌ವಿ ಕಾಲೇಜು ಆವರಣದಲ್ಲಷ್ಟೇ ಕೌನ್ಸೆಲಿಂಗ್‌ ನಡೆಯುತ್ತದೆ. ವೆಬ್‌ಸೈಟ್‌ ಅನ್ನು ಆಗಾಗ ಗಮನಿಸುತ್ತಿರಬೇಕು. ಟ್ಯೂಷನ್‌ ಶುಲ್ಕದ ರೂಪದಲ್ಲಿ ಆರಂಭದಲ್ಲಿ ₹55 ಸಾವಿರ ಪಾವತಿಸಬೇಕು. ಒಟ್ಟು ಶುಲ್ಕ ₹1.88  ಲಕ್ಷ. ಸೀಟು ತ್ಯಜಿಸಿದರೆ 10 ದಿನದೊಳಗೆ ಶುಲ್ಕ ವಾಪಸ್‌’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !