ಮಂಗಳವಾರ, ನವೆಂಬರ್ 12, 2019
26 °C
ಯಲಹಂಕ ಹೋಬಳಿ: ಒತ್ತುವರಿ ತೆರವು

ಯಲಹಂಕ ಹೋಬಳಿ: ಒತ್ತುವರಿ ತೆರವು ; ₹ 60 ಕೋಟಿ ಮೌಲ್ಯದ ಆಸ್ತಿ ವಶ

Published:
Updated:
Prajavani

ಯಲಹಂಕ: ಕೋಗಿಲು ಬಡಾವಣೆ ಮತ್ತು ಬೆಳ್ಳಹಳ್ಳಿ ಗ್ರಾಮಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡ ಜಿಲ್ಲಾಡಳಿತ, ಸುಮಾರು ₹ 60 ಕೋಟಿ ಮೌಲ್ಯದ ಆಸ್ತಿಯನ್ನು ಶನಿವಾರ ವಶಕ್ಕೆ ಪಡೆಯಿತು.

ಕೋಗಿಲು ಬಡಾವಣೆಯ ಸರ್ವೆ ನಂಬರ್‌ 99 ಮತ್ತು 107ರಲ್ಲಿ 2 ಎಕರೆ ಭೂಮಿಯಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಲು ಸಿದ್ಧತೆ ನಡೆದಿತ್ತು. ರಸ್ತೆ, ಚರಂಡಿ ನಿರ್ಮಾಣ ನಡೆಸಿದ್ದಲ್ಲೇ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿತ್ತು.

ಸರ್ವೆ ನಂಬರ್‌ 22ರಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 5 ಮನೆಗಳನ್ನು ತೆರವುಗೊಳಿಸಲಾಯಿತು. ಈ ಮನೆಗಳಲ್ಲಿ ವಾಸವಿದ್ದ ನಿವಾಸಿಗಳು, ‘ತಮ್ಮ ಮನೆಗಳನ್ನು ಬಿಟ್ಟುಬಿಡಿ’ ಎಂದು ಮನವಿ ಮಾಡಿದರು.

ಹಾಲಿ ವಾಸವಿದ್ದವರಿಗೆ ಸದ್ಯಕ್ಕೆ ತೆರವಿನಿಂದ ವಿನಾಯಿತಿ ನೀಡಿದ ತಹಶೀಲ್ದಾರ್, ‘ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಳ್ಳಬಾರದು’ ಎಂದು ತಾಕೀತು ಮಾಡಿದರು.ಬೆಳ್ಳಹಳ್ಳಿ ಗ್ರಾಮದ ಸ.ನಂ 55ರಲ್ಲಿ ಒತ್ತುವರಿ ಮಾಡಿಕೊಂಡಿದ್ದ 4 ಎಕರೆ ಜಮೀನನ್ನು ತೆರವುಗೊಳಿಸಲಾಯಿತು.

ಪ್ರತಿಕ್ರಿಯಿಸಿ (+)