ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಸಂಚಾರಕ್ಕೆ ಹೊರಟ ‘ಟುಕ್ ಟುಕ್‌’

ಸುಸ್ಥಿರ ಇಂಧನ‌, ಪರಿಸರ ಸ್ನೇಹಿ ವಾಹನ ಬಳಕೆ– ಜಾಗೃತಿ ಮೂಡಿಸಲಿದೆ ವಿದ್ಯುತ್‌ ಆಟೊ ರಿಕ್ಷಾ
Last Updated 25 ಮೇ 2019, 19:02 IST
ಅಕ್ಷರ ಗಾತ್ರ

ಬೆಂಗಳೂರು: ಸುಸ್ಥಿರ ಇಂಧನ‌ ಬಳಕೆ, ಪರಿಸರ ಸ್ನೇಹಿ ವಾಹನಗಳ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 60 ದಿನಗಳಲ್ಲಿದೇಶಾದ್ಯಂತ 6 ಸಾವಿರ ಕಿಲೋಮೀಟರ್‌ ಕ್ರಮಿಸಲು ವಿದ್ಯುತ್‌ ಚಾಲಿತ ಆಟೊ ರಿಕ್ಷಾ (ಟುಕ್‌ ಟುಕ್‌) ಸಜ್ಜಾಗಿದೆ. ಸಾರಿಗೆ ಇಲಾಖೆ ಕಾರ್ಯದರ್ಶಿ ಬಿ.ಬಸವರಾಜು ಈ ವಾಹನಕ್ಕೆ ಶನಿವಾರ ಚಾಲನೆ ನೀಡಿದರು.

‘ರಸ್ತೆಗಳಲ್ಲಿ ಸಂಚರಿಸುವಾಗ ವಾಹನಗಳಿಂದ ಹೊರಬರುವ ಹೊಗೆ ನೇರವಾಗಿ ದೇಹದೊಳಗೆ ಪ್ರವೇಶಿಸುತ್ತದೆ. ಇದರಿಂದ ನಾನಾ ಕಾಯಿಲೆಗಳು ಬರುವ ಅಪಾಯವಿದೆ. ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಇಂತಹ ಪರಿಸರ ಸ್ನೇಹಿ ವಾಹನಗಳನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಹೊಗೆ ಮುಕ್ತ ಬೆಂಗಳೂರನ್ನು ಕಟ್ಟಬೇಕು’ ಎಂದುಬಸವರಾಜು ಹೇಳಿದರು.

ಈ ರಿಕ್ಷಾವನ್ನು ವೋಲ್ಟಾ ಆಟೋಮೋಟಿವ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ವಿಎಐಪಿಎಲ್‌) ಸಂಸ್ಥೆ ಸಿದ್ಧಪಡಿಸಿದೆ. ಇದಕ್ಕೆ‘ದಿ ಸನ್‌ ಪೆಡಲ್‌ ರೈಡ್‌–ಗೋಲ್ಡನ್‌ ಕ್ವಾಡ್ರಿಲ್ಯಾಟರಲ್‌’ ಎಂದು ಹೆಸರಿಡಲಾಗಿದೆ. ಐಐಟಿ ಬಾಂಬೆಯ ಹಳೆವಿದ್ಯಾರ್ಥಿ ಸುಶೀಲ್‌ ರೆಡ್ಡಿ ಅವರು ಈ ಪ್ರವಾಸದ ಸಾರಥಿಯಾಗಿದ್ದು, ತಂಡದಲ್ಲಿ ಪಲ್ಲವಿ ಸಿದ್ಧಾಂತ, ಋತ್ವಿಕ್‌ ಆರ್ಯ, ಸುಧೀರ್‌ ಲೆಕ್ಕಾಲ ಇರಲಿದ್ದಾರೆ.

‘ಹಳೆಯ ಆಟೊ ರಿಕ್ಷಾವನ್ನು ವಿದ್ಯುತ್‌ ಚಾಲಿತ ವಾಹನಗಳನ್ನಾಗಿ ಪರಿವರ್ತಿಸಲು ಒಟ್ಟು ₹1.75
ಲಕ್ಷ ಖರ್ಚಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಪ್ರಯಾಣಿಸಲಿರುವ ಈ ವಾಹನಕ್ಕೆತುರ್ತು ಪರಿಸ್ಥಿತಿಯಲ್ಲಿ ನೆರವಾಗಲು 365 ವೋಲ್ಟ್‌ ಸಾಮರ್ಥ್ಯದ ಸೋಲಾರ್‌ ಪ್ಯಾನೆಲ್‌ ಅಳವಡಿಸಿದ್ದೇವೆ. ಇದರಿಂದ ಟುಕ್‌ಟುಕ್‌ ವಿದ್ಯುತ್‌ ಹಾಗೂ ಭಾಗಶಃ ಸೋಲಾರ್‌ ಶಕ್ತಿಯ ನೆರವಿನಿಂದ ಸಂಚರಿಸಲಿದೆ’ ಎಂದುವಿಎಐಪಿಎಲ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಮೇಶ್‌ ಚಂದ್ರ ಮಾಹಿತಿ ನೀಡಿದರು.

‘ದೇಶದಲ್ಲಿ ಎಲ್ಲರೂ ವಿದ್ಯುತ್‌ ಚಾಲಿತ ವಾಹನಗಳನ್ನು ಬಳಕೆ ಮಾಡಿದರೆ ಮಾಲಿನ್ಯ ತಡೆಯಬಹುದು. ಈಗಾ
ಗಲೇ ನಗರದಲ್ಲಿ ಒಟ್ಟು 13 ಟುಕ್‌ ಟುಕ್‌ ಆಟೊಗಳಿವೆ. ಚೆನ್ನೈ ಹಾಗೂ ಕೊಚ್ಚಿಯಲ್ಲಿ ತಲಾ 5, ಮುಂಬೈ ಹಾಗೂದೆಹಲಿಯಲ್ಲಿ ತಲಾ 2 ಆಟೊಗಳು ಸಂಚರಿಸುತ್ತಿವೆ. ಆಟೊ ಚಾಲಕರು ಮುಂದಿನ ದಿನಗಳಲ್ಲಿ ಇಂತಹ ವಿದ್ಯುತ್‌ ಚಾಲಿತ ರಿಕ್ಷಾಗಳ ಬಳಕೆಗೆ ಒಲವು ತೋರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಆರು ತಿಂಗಳುಗಳಿಂದ ಆಟೊ ಚಲಾಯಿಸುತ್ತಿದ್ದೇನೆ. ಸಾಮಾನ್ಯ ಆಟೊಗಳಿಗೆ ಹೋಲಿಸಿದರೆ ಇವುಗಳನ್ನು ಚಲಾಯಿಸುವುದು ಬಲು ಸುಲಭ. ರಾತ್ರಿ ವೇಳೆ 3ರಿಂದ 4ಗಂಟೆ ಚಾರ್ಜ್‌ ಮಾಡಿದರೆ 50ರಿಂದ 60 ಕಿಲೋಮೀಟರ್‌ ಸಂಚರಿಸುತ್ತದೆ. ದಿನಕ್ಕೆ ಹೆಚ್ಚೆಂದರೆ ಚಾರ್ಜಿಂಗ್‌ಗೆ ₹40 ವೆಚ್ಚವಾಗಬಹುದು. ಎಂಜಿನ್‌ ಇಲ್ಲದ ಕಾರಣ ನಿರ್ವಹಣೆ ಸುಲಭವಾಗಿದೆ. ಇದರಿಂದ ಹಣ ಉಳಿತಾಯ ಮಾಡುತ್ತಿದ್ದೇನೆ’ ಎನ್ನು
ತ್ತಾರೆ ಆಟೊ ಚಾಲಕ ಕೃಷ್ಣಪ್ಪ.

‘ಟುಕ್‌ ಟುಕ್‌’ ಪ್ರವಾಸಕ್ಕೆ ಐಐಟಿ ಬಾಂಬೆ, ಡಿಐಯು ಗುರು, ಯೋಗಾಬಾರ್‌, ಆಟೊಬಾಟ್‌, ಡೆಲಿವರಿ, ಒಟಿಒ ಕ್ಯಾಪಿಟಲ್‌ ಆ್ಯಂಡ್‌ ಐಬಿಐಎಸ್‌ ಇಂಡಿಯಾ ಸಂಸ್ಥೆಗಳು ಬೆಂಬಲ ನೀಡಿವೆ.

ಟುಕ್‌ಟುಕ್‌ ಸಂಚಾರ ಎಲ್ಲೆಲ್ಲಿ?

ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ, ಬೆಂಗಳೂರು ಈ ಪ್ರವಾಸದ ಪ್ರಮುಖ ನಗರಗಳು. ಮಾರ್ಗ ಮಧ್ಯೆ ಪುಣೆ, ಸೂರತ್‌, ಬರೋಡಾ, ಅಹಮದಾಬಾದ್‌, ಜೈಪುರ, ಲಖನೌ, ಗುರುಗ್ರಾಮ, ವಾರಾಣಸಿ, ಆಗ್ರಾ, ವಿಶಾಖ
ಪಟ್ಟಣ, ನೆಲ್ಲೂರು, ವೆಲ್ಲೂರು ಸೇರಿದಂತೆ ಪ್ರಮುಖ ನಗರಗಳು

ಹಳೆಯದಕ್ಕೆ ಹೊಸ ರೂಪ

ಹಳೆಯ ಆಟೊ ರಿಕ್ಷಾಗಳ ಎಂಜಿನ್‌ ಬಿಚ್ಚಿ ಬ್ಯಾಟರಿ ಅಳವಡಿಸಿ, ಅದಕ್ಕೆ ವಿದ್ಯುತ್‌ ಚಾಲಿತ ಸ್ವರೂಪ ನೀಡಿ ಮಾರ್ಪಾಡು ಮಾಡುವುದು. 2001ರ ನಂತರದ ಆಟೊಗಳಿಗೆ ಮಾರ್ಪಾಡು (ಆಲ್ಟರ್‌) ಮಾಡುವ ಅವಕಾಶವಿದೆ. ಆಸಕ್ತರು ಹಳೆಯ ಆಟೊಗಳನ್ನು ನೂತನ ಶೈಲಿಗೆ ಬದಲಾಯಿಸಿಕೊಳ್ಳಬಹುದು ಎಂದು ವಿಎಐಪಿಎಲ್‌ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮದನ್‌ ಮಾಹಿತಿ ನೀಡಿದರು.

ಪ್ರವಾಸದ ಉದ್ದೇಶಗಳೇನು?

* ಸುಸ್ಥಿರ ಇಂಧನ ಬಳಕೆ ಕುರಿತು ಜಾಗೃತಿ

* ಪರಿಸರ ಸ್ನೇಹಿ ಸಾರಿಗೆಗೆ ಪ್ರೋತ್ಸಾಹ

* ಸ್ಥಳೀಯ ಜತೆ ಚರ್ಚೆ

* ಟುಕ್‌ಟುಕ್‌ ಟೆಸ್ಟ್‌ ಡ್ರೈವ್‌ಗೆ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT