ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಿ

7
ವಕೀಲರಿಗೆ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಬಿ.ವಿ.ಶ್ರೀನಿವಾಸ್ ಸಲಹೆ

ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಿ

Published:
Updated:
Deccan Herald

ಬಾಗೇಪಲ್ಲಿ: ‘ಇವತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಕೂಡ ವ್ಯಾಪಿಸಿಕೊಂಡಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ವಕೀಲರು ಮುಂದಾಗಬೇಕು’ ಎಂದು ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಬಿ.ವಿ.ಶ್ರೀನಿವಾಸ್ ಹೇಳಿದರು.

ಪಟ್ಟಣದಲ್ಲಿರುವ ವಕೀಲರ ಸಂಘದ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿದ ವೇಳೆ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಭ್ರಷ್ಟಾಚಾರ ಸಮಾಜದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅದೀಗ ವಕೀಲ ವೃತ್ತಿಗೂ ಮಾರಕವಾಗುತ್ತಿದೆ. ವಿಶೇಷವಾಗಿ ಕಂದಾಯ ಇಲಾಖೆಯಲ್ಲಿ ತಾಂಡವವಾಡುತ್ತಿರುವ ಅವ್ಯವಹಾರಗಳಲ್ಲಿ ವಕೀಲರು ತಮ್ಮ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಲು ಹರಸಾಹಸಪಡುವಂತಾಗಿದೆ’ ಎಂದು ತಿಳಿಸಿದರು.

‘ವಕೀಲರಿಗಾಗಿ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುವುದು. ಹಂತ ಹಂತವಾಗಿ ವಕೀಲರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬಾಗೇಪಲ್ಲಿಯಲ್ಲಿ ವಕೀಲರ ಭವನ ನಿರ್ಮಾಣಕ್ಕೆ ಶ್ರಮಿಸುತ್ತೇನೆ. ಪ್ರತಿ ತಾಲ್ಲೂಕಿನಲ್ಲಿ ಇ-ಲೈಬ್ರರಿ ಪ್ರಾರಂಭಿಸಲು ಮುಂದಾಗುತ್ತೇನೆ’ ಎಂದು ಭರವಸೆ ನೀಡಿದರು.

ಹಿರಿಯ ವಕೀಲ ಫಯಾಜ್‍ ಅಹಮದ್ ಮಾತನಾಡಿ, ‘ವೃತ್ತಿಯ ನಡುವೆಯೂ ಅನೇಕ ವಕೀಲರು ವಿವಿಧ ಸಮಸ್ಯೆಗಳು ಎದುರಿಸುತ್ತಿದ್ದಾರೆ. ವಕೀಲ ವೃತ್ತಿ ಇಂದು ಭರವಸೆಯಾಗಿ ಉಳಿದಿಲ್ಲ. ಸಮಸ್ಯೆಗಳು ನಮ್ಮನ್ನೂ ಬಿಟ್ಟಿಲ್ಲ. ಸಮಸ್ಯೆಗಳ ಪರಿಹಾರಕ್ಕೆ ಪರಿಷತ್ತಿನ ಪದಾಧಿಕಾರಿಗಳು ಸ್ಪಂದಿಸಬೇಕು’ ಎಂದು ಮನವಿ ಮಾಡಿದರು.

ಹಿರಿಯ ವಕೀಲ ಗೋವಿಂದರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಉಪಾಧ್ಯಕ್ಷೆ ವಿ.ಮಂಜುಳಾ, ಕಾರ್ಯದರ್ಶಿ ಪ್ರಸನ್ನಕುಮಾರ್, ಹಿರಿಯ ವಕೀಲರಾದ ಕರುಣಾ ಸಾಗರ ರೆಡ್ಡಿ, ಅಲ್ಲಾಭಕ್ಷ್, ಸುಬ್ಬಾರೆಡ್ಡಿ, ಸೂರ್ಯನಾರಾಯಣರೆಡ್ಡಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !