ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈಶ್ವರಪ್ಪರನ್ನು ಕಸಗುಡಿಸಲು ಇಟ್ಟುಕೊಳ್ಳುವ ಶಕ್ತಿ ಎಲ್ಲರಿಗೂ ಇದೆ’

Last Updated 20 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ದಾವಣಗೆರೆ: ‘10 ವರ್ಷ ಪಕ್ಷದ ಕಚೇರಿಯಲ್ಲಿ ಕಸ ಗುಡಿಸಲಿ. ಆಮೇಲೆ ಟಿಕೆಟ್‌ ಕೇಳಲಿ ಎಂದು ಮುಸ್ಲಿಮರಿಗೆ ಈಶ್ವರಪ್ಪ ಹೇಳಿದ್ದಾರೆ. ಈಶ್ವರಪ್ಪನಂಥ ಹತ್ತತ್ತು ಮಂದಿಯನ್ನು ಮನೆಯಲ್ಲಿ ಕಸಗುಡಿಸಲು ಇಟ್ಟುಕೊಳ್ಳುವ ಸಾಮರ್ಥ್ಯ ಆಟೊ ಚಾಲಕರಿಗೂ ಇದೆ’ ಎಂದು ಸಚಿವ ಜಮೀರ್‌ ಅಹ್ಮದ್‌ಖಾನ್‌ ತಿರುಗೇಟು ನೀಡಿದರು.

ನಗರದ ಮಂಡಕ್ಕಿಭಟ್ಟಿಯಲ್ಲಿ ಶನಿವಾರ ನಡೆದ ಜೆಡಿಎಸ್‌– ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಹಾಲುಗಲ್ಲದ ಯುವಕ ತೇಜಸ್ವಿ ಸೂರ್ಯ ವಿಷವನ್ನೇ ಇಟ್ಟುಕೊಂಡಿದ್ದಾನೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಪ್ರತಿಮೆಗಳನ್ನು ಪುಡಿ ಮಾಡಿ ಬಿಸಾಕಬೇಕು ಎನ್ನುತ್ತಾನೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಅನಂತಕುಮಾರ ಹೆಗಡೆ ಹೇಳುತ್ತಾರೆ. ಬುರ್ಕ ಹಾಕಿದವರು, ಟೋಪಿ ಹಾಕಿದವರು ನನ್ನ ಕಚೇರಿಯಲ್ಲಿ ಕಾಣಿಸಬಾರದು. ಮುಸ್ಲಿಮರು ಇರುವ ಪ್ರದೇಶ ಅಭಿವೃದ್ಧಿ ಮಾಡಬಾರದು ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳುತ್ತಾರೆ. ಇಂಥವರು ಇರುವ ಪಕ್ಷಕ್ಕೆ ಓಟು ಹಾಕಬೇಕೇ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT