ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಬ್ ಮೇಲೆ ಅಬಕಾರಿ ದಾಳಿ; ನೋಟಿಸ್‌

Last Updated 9 ನವೆಂಬರ್ 2018, 20:37 IST
ಅಕ್ಷರ ಗಾತ್ರ

ಬೆಂಗಳೂರು:‌ ಸ್ಯಾಂಕಿ ರಸ್ತೆಯ ಲೀ ಮೆರಿಡಿಯನ್ ಹೋಟೆಲ್‌ನಲ್ಲಿರುವ ‘ಶುಗರ್ ಫ್ಯಾಕ್ಟರಿ‘ ಪಬ್‌ ಮೇಲೆ ದಾಳಿ ಮಾಡಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು, ಪಬ್‌ ನಡೆಸುತ್ತಿದ್ದ ‘ಮ್ಯಾಕ್ಸ್ ಚಾರ್ಲ್ಸ್ ಲಿಮಿಟೆಡ್’ ಕಂಪನಿ ಅಧ್ಯಕ್ಷರಿಗೆ ನೋಟಿಸ್‌ ನೀಡಿದ್ದಾರೆ.

ಮದ್ಯ ಮಾರಾಟಕ್ಕೆ ಪರವಾನಗಿ ಪಡೆದಿದ್ದ ಕಂಪನಿ, ಅದನ್ನು ಬೇರೊಬ್ಬರಿಗೆ ಉಪ ಗುತ್ತಿಗೆ ನೀಡಿತ್ತು. ಆ ಬಗ್ಗೆ ದಾಖಲೆ ಸಂಗ್ರಹಿಸಿದ್ದ ಅಧಿಕಾರಿಗಳು, ನಗರದ ಸಿಸಿಬಿ ಪೊಲೀಸರ ಸಹಾಯದೊಂದಿಗೆ ಅ. 28ರಂದು ಪಬ್‌ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು.

‘ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಪಬ್‌ ನಡೆಸಲಾಗುತ್ತಿತ್ತು. ದಾಳಿ ಮಾಡಿ ದಾಖಲೆಗಳನ್ನು ಜಪ್ತಿ ಮಾಡಿದ್ದೇವೆ. ಜೊತೆಗೆ, ಪಬ್‌ ನಡೆಸುತ್ತಿದ್ದ ‘ಮ್ಯಾಕ್ಸ್ ಚಾರ್ಲ್ಸ್ ಲಿಮಿಟೆಡ್’ ಕಂಪನಿ ಅಧ್ಯಕ್ಷರಿಗೆ ನೋಟಿಸ್‌ ಕೊಟ್ಟಿದ್ದು, ಮುಂದಿನ 10 ದಿನದೊಳಗೆ ಕಚೇರಿಗೆ ಬಂದು ಉತ್ತರ ನೀಡುವಂತೆ ಸೂಚಿಸಿದ್ದೇವೆ. ಬರದಿದ್ದರೆ, ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅಬಕಾರಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT