ಮಂಗಳವಾರ, ನವೆಂಬರ್ 19, 2019
23 °C
ಅಸಭ್ಯ ಪೋಸ್ಟ್; ಸಾಫ್ಟ್‌ವೇರ್‌ ಎಂಜಿನಿಯರ್ ಬಂಧನ

ನಕಲಿ ಇನ್‍ಸ್ಟಾಗ್ರಾಮ್‍: ಬಂಧನ

Published:
Updated:
Prajavani

ಬೆಂಗಳೂರು: ಸ್ನೇಹಿತೆ ಹೆಸರಿನಲ್ಲಿ ಇನ್‍ಸ್ಟಾಗ್ರಾಮ್‍ ಆ್ಯಪ್‌ನಲ್ಲಿ ನಕಲಿ ಖಾತೆ ತೆರೆದು ಅಸಭ್ಯ ರೀತಿಯ ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡುತ್ತಿದ್ದ ಆರೋಪದಡಿ ನಿತಿನ್ ಆಚಾರಿ ಎಂಬಾತನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

‘ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ನಿತಿನ್‌, ನಗರದ ಬೆಳ್ಳಂದೂರಿನಲ್ಲಿರುವ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ
ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಆತನ ಕೃತ್ಯದ ವಿರುದ್ಧ ಸ್ನೇಹಿತೆಯೇ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಹಾಗೂ ಯುವತಿ ಪರಸ್ಪರ ಪರಿಚಯವಾಗಿದ್ದರು. ಕೆಲ ತಿಂಗಳ ಹಿಂದಷ್ಟೇ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಯುವತಿ ಬೇರೊಂದು ಕಂಪನಿಗೆ ಸೇರಿದ್ದರು. ಅಲ್ಲಿ ಪರಿಚಯವಾದ ಯುವಕನ ಜೊತೆ ಹೆಚ್ಚು ಓಡಾಡಲಾರಂಭಿಸಿದ್ದರು. ಅದರಿಂದ ಕೋಪಗೊಂಡ ಆರೋಪಿ, ಯುವತಿಗೆ ಕಿರುಕುಳ ನೀಡಲಾರಂಭಿಸಿದ್ದ.’

‘ಯುವತಿ ಹೆಸರಿನಲ್ಲಿ ನಕಲಿ ಇ–ಮೇಲ್ ಐಡಿ ಸೃಷ್ಟಿಸಿದ್ದ ಆತ, ಅದನ್ನು ಬಳಸಿ ಇನ್‍ಸ್ಟಾಗ್ರಾಮ್‍ ಆ್ಯಪ್‌ನಲ್ಲಿ ನಕಲಿ ಖಾತೆ ತೆರೆದಿದ್ದ. ಯುವತಿಯ ಫೋಟೊ ಹಾಗೂ ಅವುಗಳ ಮೇಲೆ ಅಸಭ್ಯವಾದ ಪದಗಳನ್ನು ಬರೆದು ಪೋಸ್ಟ್ ಮಾಡಲಾರಂಭಿಸಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)