ಮನೆಗೆ ಬೆಂಕಿ: ಸುಟ್ಟು ಭಸ್ಮವಾದ ವಸ್ತುಗಳು

7

ಮನೆಗೆ ಬೆಂಕಿ: ಸುಟ್ಟು ಭಸ್ಮವಾದ ವಸ್ತುಗಳು

Published:
Updated:
Deccan Herald

ಹುಬ್ಬಳ್ಳಿ: ಹೆಗ್ಗೇರಿಯ ಶಾಂತವ್ವ ರಾಜಪ್ಪ ಬಿಲಾನ ಎಂಬುವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಶುಕ್ರವಾರ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದನ್ನು ಗಮನಿಸಿದ ಮನೆಯವರು ಹೊರಗೆ ಓಡಿ ಹೋಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ದೇವರ ದೀಪದಿಂದ ಬಾಗಿಲ ಪರದೆಗೆ ಬೆಂಕಿ ಹೊತ್ತಿಕೊಂಡು ಅದು ಮನೆಯನ್ನು ಆವರಿಸಿತು. ಮನೆಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಹೋಗಿದ್ದು ಸುಮಾರು ₹3 ಲಕ್ಷ ನಷ್ಟ ಸಂಭವಿಸಿದೆ’ ಎಂದು ಶಾಂತವ್ವ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !