ಅಗ್ನಿಶಾಮಕ ದಳದ ಸೇವೆಗೆ 77 ಮಂದಿ

ಗುರುವಾರ , ಏಪ್ರಿಲ್ 25, 2019
31 °C

ಅಗ್ನಿಶಾಮಕ ದಳದ ಸೇವೆಗೆ 77 ಮಂದಿ

Published:
Updated:

ಬೆಂಗಳೂರು: ಆರ್.ಎ. ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ತರಬೇತಿ ಪಡೆದ ಅಗ್ನಿಶಾಮಕ ಠಾಣಾಧಿಕಾರಿ ಹಾಗೂ ಅಗ್ನಿಶಾಮಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಗುರುವಾರ ನಡೆಯಿತು.

ಬನ್ನೇರುಘಟ್ಟ ರಸ್ತೆಯಲ್ಲಿರುವ ಅಕಾಡೆಮಿಯ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 51 ಠಾಣಾಧಿಕಾರಿಗಳು ಹಾಗೂ 26 ಅಗ್ನಿಶಾಮಕರು ಸೇವೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

‘ಧಾರವಾಡ ಕಟ್ಟಡ ದುರಂತ, ಕೊಡಗು ನೆರೆ ಹಾಗೂ ಯಲಹಂಕದಲ್ಲಿ ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದ್ದ ಪ್ರಕರಣದಲ್ಲಿ ಅಗ್ನಿಶಾಮಕ ದಳದವರು ಮಾಡಿದ ಕೆಲಸ ಶ್ಲಾಘನೀಯ’ ಎಂದು ವಿಜಯ್‌ ಭಾಸ್ಕರ್ ಹೇಳಿದರು.

‘ಶಿಸ್ತುಬದ್ಧ ತರಬೇತಿ ಪಡೆದಿರುವ 77 ಮಂದಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಅಣಿಯಾಗಿದ್ದಾರೆ. ಅವರೆಲ್ಲ ಉತ್ತಮವಾಗಿ ಕರ್ತವ್ಯ ನಿರ್ವಹಿಸಲಿ’ ಎಂದು ಹಾರೈಸಿದರು.

ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಡಿಜಿಪಿ ಎಂ.ಎನ್.ರೆಡ್ಡಿ, ಎಡಿಜಿಪಿ ಸುನೀಲ್ ಅಗರವಾಲ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !