ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡುಗಡ್ಡೆಯಲ್ಲಿ ಆರು ಜನ

Last Updated 8 ಆಗಸ್ಟ್ 2019, 17:43 IST
ಅಕ್ಷರ ಗಾತ್ರ

ಲಿಂಗಸುಗೂರು (ರಾಯಚೂರು ಜಿಲ್ಲೆ): ಕೃಷ್ಣಾ ನದಿ ಪ್ರವಾಹದಲ್ಲಿ ತಾಲ್ಲೂಕಿನ ಕರಕಲಗಡ್ಡೆಯ ನಡುಗಡ್ಡೆಯಲ್ಲಿ ಗರ್ಭಿಣಿ ಸೇರಿ ಆರು ಜನ ಸಿಕ್ಕಿಹಾಕಿಕೊಂಡಿದ್ದಾರೆ.10 ಜಾನುವಾರು, 80 ಕುರಿ–ಮೇಕೆ, ನಾಲ್ಕು ನಾಯಿಗಳೂ ಅಲ್ಲಿವೆ.

‘ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತರಲು ತಾಲ್ಲೂಕುಆಡಳಿತ ಮುಂದಾಗುತ್ತಿಲ್ಲ’ ಎಂದು ಸಂಬಂಧಿ ಆದಪ್ಪ ಹನುಮಪ್ಪ ಆರೋಪಿಸಿದ್ದಾರೆ.

‘ಕರಕಲಗಡ್ಡಿ ಪ್ರದೇಶದ ಜನರ ಜತೆ ನಿರಂತರ ಸಂಪರ್ಕದಲ್ಲಿದ್ದು, ಅವರು ಸುರಕ್ಷಿತವಾಗಿದ್ದಾರೆ. ಹೆಚ್ಚುತ್ತಿರುವ ಪ್ರವಾಹ ಹಾಗೂಹವಾಮಾನ ವೈಪರೀತ್ಯದಿಂದಾಗಿ ಅವರನ್ನು ಕರೆತರಲು ಸಾಧ್ಯವಾಗುತ್ತಿಲ್ಲ. ಆದರೂ, ಕರೆತರುವ ಪ್ರಯತ್ನ ಮುಂದುವರಿಸಿದ್ದೇವೆ’ ಎಂದುಉಪ ವಿಭಾಗಾಧಿಕಾರಿ ರಾಜಶೇಖರ ಡಂಬಳ ಹೇಳಿದರು. ನಡುಗಡ್ಡೆಗಳಾದಮ್ಯಾದರಗಡ್ಡಿಯಿಂದ 18 ಹಾಗೂ ವಂಕಮ್ಮನಗಡ್ಡಿಯಿಂದ ಐವರನ್ನು ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗಿದೆ. ಎನ್‌ಡಿಆರ್‌ಎಫ್‌ ಹಾಗೂ ಸೇನಾಪಡೆಯ ತಂಡ ಜಿಲ್ಲೆಯಲ್ಲಿ ಬೀಡುಬಿಟ್ಟವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT