ಹುಬ್ಬಳ್ಳಿ ಇಂದಿರಾ ಗಾಜಿನ ಮನೆಯಲ್ಲಿ 13ರಿಂದ ಫಲ– ಪುಷ್ಪ ಪ್ರದರ್ಶನ

7

ಹುಬ್ಬಳ್ಳಿ ಇಂದಿರಾ ಗಾಜಿನ ಮನೆಯಲ್ಲಿ 13ರಿಂದ ಫಲ– ಪುಷ್ಪ ಪ್ರದರ್ಶನ

Published:
Updated:

ಹುಬ್ಬಳ್ಳಿ: ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ಇಂದಿನಿಂದ 15ರ ವರೆಗೆ ಜಿಲ್ಲಾ ಮಟ್ಟದ ಫಲ ಪುಷ್ಪ ಪ್ರದರ್ಶನ ನಡೆಯಲಿದೆ. ಬಗೆ ಬಗೆಯ ಹೂಗಳು, ವಿವಿಧ ಮಾದರಿಗಳು ಜನರನ್ನು ಸೆಳೆಯಲಿವೆ.

ಪುಷ್ಪಕ ವಿಮಾನ: ಹುಬ್ಬಳ್ಳಿ ವಿಮಾನ ನಿಲ್ದಾಣ ಆರಂಭವಾದ ನಂತರ ಸಂಪರ್ಕ ಸೇವೆಯಲ್ಲಿ ಆಗಿರುವ ಗಣನೀಯ ಬದಲಾವಣೆಯನ್ನು ಬಿಂಬಿಸಲು ಹೂಗಳಿಂದ ನಿರ್ಮಾಣ ಮಾಡಿರುವ ವಿಮಾನ ಪ್ರಮುಖ ಆಕರ್ಷಣೆಯಾಗಿದೆ. ತಾರಸಿ ತೋಟವನ್ನು ಪ್ರದರ್ಶಿಸುವ ಮೂಲಕ ಅದರಿಂದ ಆಗುವ ಪ್ರಯೋಜನಗಳನ್ನು ನಗರವಾಸಿಗಳಿಗೆ ತಿಳಿಸಲಾಗುತ್ತದೆ. ರೈತರಿಗೆ ಮಾಹಿತಿ ನೀಡಲು ಹಸಿರುಮನೆ, ನೆರಳು ಪರದೆ, ಈರುಳ್ಳಿ ಶೇಖರಣಾ ಘಟಕದ ಮಾದರಿ ನಿರ್ಮಾಣ ಮಾಡಲಾಗುತ್ತೆ. ಇದರ ಜೊತೆಗೆ ಅಣಬೆ, ಜೇನುಕೃಷಿ ತರಬೇತಿಯನ್ನು ಸಹ ಹಮ್ಮಿಕೊಳ್ಳಲಾಗಿದೆ.

ಸಂಗೀತ ಕಾರ್ಯಕ್ರಮ: ಜನರನ್ನು ಆಕರ್ಷಿಸಲು ಸಂಗೀತ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಶನ್ ಕಲಾವಿದರು ಶಾಸ್ತ್ರೀಯ ಹಾಗೂ ಸುಮಗ ಸಂಗೀತ ಪ್ರಸ್ತುತಪಡಿಸುವರು. ಪ್ರದರ್ಶನದ ಮೂರು ದಿನಗಳು ಸಂಜೆ 5.30 ರಿಂದ 7.30ರ ವರೆಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

15ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅವಳಿ ನಗರದಲ್ಲಿ ಆಯೋಜಿಸಲಾಗಿದ್ದ ಉದ್ಯಾನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗುವುದು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !