‘ಜನಪದ ಹಾಡುಗಳು ಶ್ರೇಷ್ಠ’: ಗಾಯಕ ಗುರುರಾಜ ಹೊಸಕೋಟೆ

7

‘ಜನಪದ ಹಾಡುಗಳು ಶ್ರೇಷ್ಠ’: ಗಾಯಕ ಗುರುರಾಜ ಹೊಸಕೋಟೆ

Published:
Updated:
Prajavani

ಕಲಬುರ್ಗಿ: ‘ಮನರಂಜನೆ ಕೊಡುವ ಚಲನಚಿತ್ರ ಗೀತೆಗಳಿಗಿಂತ ಜನಪದ ಹಾಡುಗಳು ಶ್ರೇಷ್ಠ’ ಎಂದು ಗಾಯಕ ಗುರುರಾಜ ಹೊಸಕೋಟೆ ಹೇಳಿದರು.

ಉದನೂರ ರಸ್ತೆಯ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನಪದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚಲನಚಿತ್ರಗಳಿಂದ ದಿಢೀರ್ ಖ್ಯಾತಿ ಗಳಿಸಬಹುದು ನಿಜ. ಆದರೆ, ನೆಮ್ಮದಿ ಇರುವುದಿಲ್ಲ. ಜನಪದ ಹಾಡುಗಳಲ್ಲಿ ಜೀವನ ಇದೆ. ಜನಪದ ಹಾಡುಗಳೇ ನನಗಿಷ್ಟವಾದರೂ ಚಲನಚಿತ್ರ ಗೀತೆಗಳನ್ನು ಹಾಡುವ ಅವಕಾಶ ಲಭಿಸಿದ್ದರಿಂದ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ. ಕನ್ನಡದ ಜನಪ್ರಿಯ ನಟರ ಸಿನಿಮಾಗಳಲ್ಲಿ ಹಾಡುವ, ಅಭಿನಯಿಸುವ ಅವಕಾಶ ಸಿಕ್ಕಿತು. ಹೀಗಾಗಿ ಜನರಿಗೆ ರಂಜನೆ ಕೊಡಲು ಮುಂದಾದೆ’ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಆದಿ ಬಣಜಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ನವದಿ, ಜಯಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಶಿವಶಂಕರ ಬಿರಾದಾರ, ಶಿವಾಜಿ, ಆನಂದ ಲೇಂಗಟಿ ಇದ್ದರು.

ಸಂಸ್ಥೆಯ ಅಧ್ಯಕ್ಷೆ ಭಾಗಮ್ಮ ಉದನೂರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಕಾರ್ಯದರ್ಶಿ ರಾಜಕುಮಾರ ಉದನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಭಾರತಿ ನಿರೂಪಿಸಿ, ರೇಣುಕಾ ವಂದಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !