ಶನಿವಾರ, ಫೆಬ್ರವರಿ 27, 2021
31 °C

ಪ್ರೈಡ್ ಕಾಲೇಜಿನಲ್ಲಿ ತಿಂಡಿ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ತರಕಾರಿಗಳ ತಿಂಡಿ, ನೀರ್ ದೋಸೆ, ಮಸಾಲೆ ದೋಸೆ, ಕಡ್ಲೆ ಕಾಯಿ ಮಿಠಾಯಿ, ಹಣ್ಣುಗಳ ವ್ಯಂಜನ, ರಾಗಿ ರೊಟ್ಟಿ, ಜೋಳದ ರೊಟ್ಟಿ ಇವೆಲ್ಲವನ್ನು ನೋಡುತ್ತಿದ್ದವರ ಬಾಯಲ್ಲಿ ನೀರೂರಿತು. ಘಮ್ ಎಂದು ಹರಡಿದ ಸುವಾಸನೆ ತಿನ್ನುವ ತವಕ ಮೂಡಿಸಿತು. 

ಎಲ್ಲವೂ ಒಂದಕ್ಕಿಂತ ಒಂದು ರುಚಿಕರ.  

ಇದು ಚೊಕ್ಕನಹಳ್ಳಿ ಗ್ರಾಮದ ಪ್ರೈಡ್ ಪದವಿ ಮತ್ತು ಪದವಿಪೂರ್ವ ಕಾಲೇಜು ಆಯೋಜಿಸಿದ್ದ ತಿಂಡಿ ಮೇಳದ ನೋಟ. ತಿಂಡಿ ಮೇಳವನ್ನು ಉದ್ಘಾಟಿಸಿದ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್‌, ‘ರುಚಿಕರ ಊಟ ಕೇವಲ ಹೊಟ್ಟೆ  ತುಂಬಿಸುವುದಿಲ್ಲ. ಬದಲಿಗೆ ಮನಸ್ಸಿನ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ಅದಷ್ಟು ರುಚಿಕರವಾದ ಒಳ್ಳೆಯ ಆಹಾರದ ಕಡೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು’ ಎಂದು ಕಿವಿಮಾತು ಹೇಳಿದರು.

ಸಂಸ್ಥಾಪಕ ಅಧ್ಯಕ್ಷರಾದ ರಮೇಶ್ ಮಾತನಾಡಿ, ‘ವಿದ್ಯಾರ್ಥಿಗಳಿಗೆಶಿಕ್ಷಣದ ಜೊತೆ ನಮ್ಮ ಆಹಾರ ಪದ್ಧತಿಯ ಪ್ರಜ್ಞೆ ಬೆಳೆಯಲಿ ಎಂಬ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ’ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಅಂಬರೀಷ್‌ ಆರ್.ಎನ್. ಅವರು, ‘800 ವಿದ್ಯಾರ್ಥಿಗಳು ತಿಂಡಿ ಮೇಳದಲ್ಲಿ ಭಾಗವಹಿಸಿದ್ದಾರೆ. ಉತ್ತರ ಕರ್ನಾಟಕ, ಮಲೆನಾಡು, ಅರೆ ಮಲೆನಾಡಿನ ಪ್ರಸಿದ್ಧ ತಿಂಡಿಗಳನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಪ್ರತಿ ವರ್ಷ ತಿಂಡಿ ಮೇಳವನ್ನು ಆಯೋಜಿಸಲಾಗುವುದು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.