ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಕಾರ ಧಾಮ ಇನ್ನು ವನ್ಯಜೀವಿ ವಲಯ

Last Updated 15 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಬಾಗಲಕೋಟೆ ವಿಭಾಗದ ಬೀಳಗಿ ವಲಯದ ಯಡಹಳ್ಳಿ ಚಿಂಕಾರ ವನ್ಯಧಾಮವನ್ನು ಬೀಳಗಿ ವನ್ಯಜೀವಿ ವಲಯವೆಂದು ಅರಣ್ಯ ಇಲಾಖೆ ಘೋಷಿಸಿದ್ದು, ಬೀಳಗಿ ವಲಯದ ಉಳಿದ ಪ್ರದೇಶವನ್ನು ಬಾಗಲಕೋಟೆ ಪ್ರಾದೇಶಿಕ ವಲಯಕ್ಕೆ ಸೇರಿಸಿದೆ.

ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ಮತ್ತು ಘಟಪ್ರಭಾ ನದಿ ತೀರದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಜಿಂಕೆ ಜಾತಿಗೆ ಸೇರಿದ ‘ಚಿಂಕಾರ’ (ಇಂಡಿಯನ್ ಗೆಝೆಲ್) ರಕ್ಷಣೆ ಉದ್ದೇಶದಿಂದ ಬೀಳಗಿ ವಲಯದ ಹಾಗೂ ಮುಧೋಳ ವಲಯದ ಗ್ರಾಮಗಳ 9,636 ಹೆಕ್ಟೇರ್‌ ಪ್ರದೇಶವನ್ನು ಯಡಹಳ್ಳಿ ಚಿಂಕಾರ ವನ್ಯಧಾಮವಾಗಿ ರಾಜ್ಯ ಸರ್ಕಾರ 2015ರಲ್ಲಿ ಘೋಷಿಸಿತ್ತು. ಈ ಪ್ರದೇಶವು ಬೀಳಗಿ ಹಾಗೂ ಮುಧೋಳ ತಾಲ್ಲೂಕುಗಳ ಪ್ರದೇಶವನ್ನು ಒಳಗೊಂಡಿದೆ. ಅದರಲ್ಲಿ, ಹೆಚ್ಚಾಗಿ ಬೀಳಗಿ ಪ್ರಾದೇಶಿಕ ವಲಯದ ವ್ಯಾಪ್ತಿಯ ಪ್ರದೇಶವಾಗಿದೆ. ಬೀಳಗಿ ವಲಯವನ್ನು ವನ್ಯಜೀವಿ ವಲಯವಾಗಿ ಘೋಷಿಸುವಂತೆ ಬೆಳಗಾವಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಪ್ರಸ್ತಾವ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT