ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಒನಿಂದ ನಗದು ವಂಚನೆ

Last Updated 5 ಡಿಸೆಂಬರ್ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟ ಗ್ರಾಮದ ರೈತರ ಸಹಕಾರ ಸೇವಾ ಸಂಘದ ಸಿಇಒ ಪುರುಷೋತ್ತಮ್ ಮತ್ತು ಕಂಪ್ಯೂಟರ್ ಆಪರೇಟರ್ ರಾಮಮೂರ್ತಿ ಅವರು ನಕಲಿ ಖಾತೆಗಳನ್ನು ಸೃಷ್ಟಿಸಿ ಠೇವಣಿ ಹಣವನ್ನು ಲಪಟಾಯಿಸಿದ ಬಗ್ಗೆಸೋಲದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣದ ಹಿನ್ನೆಲೆ: ಗೋಪಾಲಗೌಡ, ವರಲಕ್ಷ್ಮಿ, ನಾರಾಯಣಪ್ಪ, ದೊಡ್ಡ ತಾಯಮ್ಮ, ಮುನಿಯಪ್ಪ ಅವರು ಬ್ಯಾಂಕ್‍ನಲ್ಲಿ ಹಣ ಠೇವಣಿ ಇಟ್ಟಿದ್ದರು.

‘2017ರ ಜ. 13ರಿಂದ 2018ರ ಮೇ2ರವರೆಗೆ ಬಡ್ಡಿ ಹಣ ನೀಡಬೇಕಾಗಿತ್ತು. ಆದರೆ ಈ ಅವಧಿಯಲ್ಲಿ ಬ್ಯಾಂಕ್ ಸಿಬ್ಬಂದಿಯಾಗಿದ್ದ ಪುರುಷೋತ್ತಮ್ ಬೇರೆ ಹೆಸರುಗಳಲ್ಲಿ ನಕಲಿ ಖಾತೆಗಳನ್ನು ತೆರೆದು ₹ 1,73,068 ಮೊತ್ತ ವಂಚಿಸಿದ್ದಾರೆ. ತಮಗೆ ಬಡ್ಡಿ ಹಣವನ್ನು ನೀಡಿಲ್ಲ ಎಂದು ಠೇವಣಿದಾರರು ಬ್ಯಾಂಕ್‌ಗೆ ಬಂದಾಗ ಸತ್ಯ ಹೊರಬಿದ್ದಿದೆ’ ಎಂದು ಬ್ಯಾಂಕ್‍ನ ಅಧ್ಯಕ್ಷರಾದ ನಾಗರಾಜ್ ದೂರು ನೀಡಿದ್ದಾರೆ.

ಬ್ಯಾಂಕ್‍ನ ಹಾಲಿ ಸಿಇಒ ಪುರುಷೋತ್ತಮ್ ತೆಗೆದುಕೊಂಡಿರುವ ಒಡವೆ ಸಾಲ ಸುಸ್ತಿಯಾಗಿದೆ. ಸಾಕಷ್ಟು ಆರೋಪಗಳು ಅವರ ಮೇಲೆ ಇದೆ. ಅದರೂ ಅಧಿಕಾರಿಗಳು ಅವರನ್ನು ಸಿಇಒ ಮಾಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT