ಅನುದಾನ ದುರ್ಬಳಕೆ; ಹೆಗ್ಗೆರೆ ಪಂಚಾಯಿತಿ ಅಧ್ಯಕ್ಷೆ ವಜಾ

ಶುಕ್ರವಾರ, ಏಪ್ರಿಲ್ 19, 2019
22 °C
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಆದೇಶ

ಅನುದಾನ ದುರ್ಬಳಕೆ; ಹೆಗ್ಗೆರೆ ಪಂಚಾಯಿತಿ ಅಧ್ಯಕ್ಷೆ ವಜಾ

Published:
Updated:
Prajavani

ತುಮಕೂರು: ತಾಲ್ಲೂಕಿನ ಹೆಗ್ಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಎನ್.ಮಂಜುಳಾ ಅವರ ಸದಸ್ಯತ್ವ ಹಾಗೂ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಗ್ರಾಮೀಣಾಭಿವೃದ್ಧಿ ಇಲಾಖೆ ಮಾರ್ಚ್ 20ರಂದು ಆದೇಶಿಸಿದೆ.

ಹಿನ್ನೆಲೆ: 2016–17ರಲ್ಲಿ ಕೇವಲ 7 ಸಭೆಗಳನ್ನ ನಡೆಸಿರುವುದು, ಪಂಚಾಯಿತಿ ಸಿಬ್ಬಂದಿ ವೇತನ ಮತ್ತು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಗೌರವ ಧನ ಪಾವತಿಸುವ ಉದ್ದೇಶಕ್ಕೆ ಮಾತ್ರ ಬಳಸಬೇಕಾದ ಗ್ರಾಮ ಪಂಚಾಯಿತಿ ನಿಧಿ–1ರಲ್ಲಿನ ಅನುದಾನವನ್ನು ನಿಯಮಬಾಹಿರವಾಗಿ ಬೀದಿ ದೀಪ ಸಾಮಗ್ರಿ ಖರೀದಿಗೆ ಬಳಕೆ ಮಾಡಿದ್ದಾರೆ. ತುಮಕೂರಿನ ಆಶ್ರಯ ಎಂಟರ್‌ಪ್ರೈಸಸ್ ನಿಂದ ₹ 3,25 ಲಕ್ಷ ಮೊತ್ತದ ವಸ್ತುಗಳನ್ನು ಖರೀದಿಸಿದ್ದಾರೆ. ಈ ಖರೀದಿ ಪ್ರಕ್ರಿಯೆಯಲ್ಲಿ ಪ್ರಕಟಣೆ, ವೋಚರ್ಸ್, ತುಲನಾತ್ಮಕ ದರಪಟ್ಟಿಯೂ ಇಲ್ಲ. ಹೀಗೆ ಟೆಂಡರ್ ಇಲ್ಲದೇ ಖರೀದಿ ಮಾಡಿ ಕೆ.ಟಿ.ಪಿ.ಪಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !