ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ನಿರ್ವಹಣೆ; ನ. 16ರಂದು ಸಲಹಾ ಸಭೆ

Last Updated 14 ನವೆಂಬರ್ 2018, 19:02 IST
ಅಕ್ಷರ ಗಾತ್ರ

ಬೆಂಗಳೂರು: ಗಾಂಧಿ ಬಜಾರ್‌ ಮಾರುಕಟ್ಟೆ ನಿರ್ವಹಣೆ ಅಭಿವೃದ್ಧಿಗೆ ಸಂಬಂಧಿಸಿ ಸಾರ್ವಜನಿಕರ ಸಲಹಾ ಸಭೆ ಮತ್ತು ಕಾರ್ಯಾಗಾರ ನ. 16ರಂದು ಮಧ್ಯಾಹ್ನ 2ರಿಂದ 6ರವರೆಗೆ ಬಸವನಗುಡಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ನಡೆಯಲಿದೆ.

ನಗರ ಪ್ರದೇಶಗಳಿಗೆ ತಾಜಾ ಹಣ್ಣು ಹಾಗೂ ತರಕಾರಿ ಪೂರೈಕೆ ಸಂಬಂಧಿಸಿ ರಾಜ್ಯ ಸರ್ಕಾರವು ಜರ್ಮನಿಯ ಡಿಯುಚ್‌ ಜೆಸೆಲ್‌ಷಾಫ್ಟ್‌ ಫ್ಯೂವರ್‌ ಇಂಟರ್‌ನ್ಯಾಷನಲ್‌ ಕಂಪನಿಯ ಸಹಯೋಗದಲ್ಲಿ ‘ಗ್ರೀನ್‌ ಲಾಜಿಸ್ಟಿಕ್‌ ಪ್ರಾಜೆಕ್ಟ್‌’ ರೂಪಿಸಿ ಕಾರ್ಯ ನಿರ್ವಹಿಸುತ್ತಿದೆ. ಇದರ ಅಡಿ ನಗರ ಪ್ರದೇಶಗಳ ಬೀದಿ ಮಾರುಕಟ್ಟೆಗಳ ನಿರ್ವಹಣೆ ಕುರಿತು ಉಪ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಅದಕ್ಕಾಗಿ ಬಸವನಗುಡಿಯ ಗಾಂಧಿ ಬಜಾರ್‌ ಮಾರುಕಟ್ಟೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ.

ಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ (ಇಎಸ್‌ಜಿ) ಸಂಸ್ಥೆಯು ಮಾರುಕಟ್ಟೆ ನಿರ್ವಹಣೆ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಲು ಆಯ್ಕೆಯಾಗಿದೆ. ಈ ಸಲುವಾಗಿ ಸಭೆ ಆಯೋಜಿಸಲಾಗಿದೆ ಎಂದು ಗ್ರೀನ್‌ ಲಾಜಿಸ್ಟಿಕ್‌ ಪ್ರಾಜೆಕ್ಟ್‌ ಪ್ರಕಟಣೆ ತಿಳಿಸಿದೆ.

ಭಾಗವಹಿಸಲು ಇಚ್ಛಿಸುವವರು ಇಎಸ್‌ಜಿಯ ಮಲ್ಲೇಶ್‌ (ಮೊ.9448377402 ) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT