ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಿಟ್ಟ ಹಣದಿಂದ ಪೊಲೀಸರಿಗೆ ಕೊಡುಗೆ

Last Updated 17 ಮೇ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಟಿಐಎಸ್‌ಬಿ ಶಾಲೆಯ ಪಿಯುಸಿ ವಿದ್ಯಾರ್ಥಿ ಪ್ರಣವ್‌ ಪ್ರಮೋದ್‌ ಸತತ ಮೂರು ವರ್ಷಗಳ ಕಾಲ ಕೂಡಿಟ್ಟ ಹಣದಲ್ಲಿ ನಗರದ ಸಂಚಾರ ಪೊಲೀಸರಿಗೆ ಬ್ಯಾಗ್‌ ಹಾಗೂ ಕುಡಿಯುವ ನೀರಿನ ಬಾಟಲಿಗಳನ್ನು ಕೊಡುಗೆ ನೀಡುವ ಮೂಲಕ ಗಮನ ಸೆಳೆದಿದ್ದಾನೆ.

ಪೊಲೀಸರು ನಗರದ ಸಂಚಾರ ದಟ್ಟಣೆ ನಿವಾರಣೆಗೆ ಶ್ರಮಿಸುತ್ತಿರುವುದನ್ನು ಕಂಡು ಸ್ಫೂರ್ತಿಗೊಂಡ ಪ್ರಣವ್‌,
ತಾಯಿಯ ಸಲಹೆಯಂತೆ ಪೊಲೀಸ್‌ ಸಿಬ್ಬಂದಿಗೆ ಬ್ಯಾಗ್‌ ಹಾಗೂ ನೀರಿನ ಬಾಟಲಿಗಳನ್ನು ಕೊಡುಗೆಯಾಗಿ ನೀಡಿದ್ದಾನೆ.

ನಗರದ ಸಂಚಾರ ತರಬೇತಿ ಕೇಂದ್ರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬಾಲಕ ನೀಡಿದ 500 ಬ್ಯಾಗ್‌ ಹಾಗೂ ನೀರಿನ ಬಾಟಲಿಗಳನ್ನು ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಅವರು ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಗೆ ವಿತರಿಸಿದರು.

‘ಸಮಾಜಕ್ಕೆ ಸಹಾಯ ಮಾಡುವವರನ್ನು ನಾವು ಕಡೆಗಣಿಸುತ್ತೇವೆ. ಬೆಂಗಳೂರು ದಟ್ಟಣೆಯ ಕಾರಣಕ್ಕೆ ಕುಖ್ಯಾತಿ ಪಡೆದಿದೆ. ಅದರ ನಿವಾರಣೆಗೆ ಬಿಸಿಲು, ಮಳೆ ಎನ್ನದೇ ಶ್ರಮಿಸುವ ಪ್ರತಿಯೊಬ್ಬರನ್ನು ನಾವು ಗೌರವಿಸಬೇಕು’ ಎಂದು ಪ್ರಣವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT