19ರಿಂದ ಆದಿಶಕ್ತಿ ದೇವಿ ಉತ್ಸವ

ಭಾನುವಾರ, ಏಪ್ರಿಲ್ 21, 2019
26 °C

19ರಿಂದ ಆದಿಶಕ್ತಿ ದೇವಿ ಉತ್ಸವ

Published:
Updated:
Prajavani

ಬೆಂಗಳೂರು: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ದೇಶಹಳ್ಳಿ ಗ್ರಾಮದ ಆದಿಶಕ್ತಿ ಕಾಳಿಕಾಂಬ ದೇವಿಯ 54ನೇ ವಾರ್ಷಿಕ ಮಹೋತ್ಸವವು ಇದೇ 19 ಹಾಗೂ 20ರಂದು ನಡೆಯಲಿದೆ.

ಏ.19ರ ರಾತ್ರಿ 9ಕ್ಕೆ ವೆಂಕಟೇಶ್ವರ ಸ್ವಾಮಿಗೆ ಪ್ರಥಮ ಪೂಜೆ ನೆರವೇರಿಸಲಾಗುತ್ತದೆ. ರಾತ್ರಿ 11ಗಂಟೆಯ ಬಳಿಕ ಮಡಿಲಕ್ಕಿ (ಸೋಗಲು) ಕಾರ್ಯಕ್ರಮ ನಡೆಯಲಿದೆ.

ಏ.20ರ ಬೆಳಿಗ್ಗೆ 5ಗಂಟೆಯಿಂದ 7ಗಂಟೆಯವರೆಗೆ ಬಾಯಿಬೀಗ ಹಾಗೂ ಗಿಂಡಿ ಉತ್ಸವ ನಡೆಯುತ್ತದೆ. ಬೆಳಿಗ್ಗೆ 8 ಗಂಟೆಯಿಂದ ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಮರುವಾರದ ಹಬ್ಬದ ಅಂಗವಾಗಿ ಏ.26ರಂದು ಬೆಳಿಗ್ಗೆ 6 ಗಂಟೆಗೆ ಗಿಂಡಿ ಉತ್ಸವ ಹಾಗೂ ಪೂಜಾ ಕುಣಿತ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !